1 Samuel 15:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಮಾತನ್ನು ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಇಸ್ರಾಯೇಲರ ಅರಸುತನದಿಂದ ನಿವಾರಿಸಿದ್ದಾನೆ” ಎಂದು ಹೇಳಿ ತಿರುಗಿಕೊಂಡು ಹೊರಡಲು
Kannada BSI Bible 2016
ಆದಕ್ಕೆ ಸಮುವೇಲನು ಸೌಲನಿಗೆ--ನಾನು ನಿನ್ನ ಸಂಗಡ ಹಿಂತಿರುಗಿ ಬರುವದಿಲ್ಲ; ಯಾಕಂದರೆ ನೀನು ಕರ್ತನ ವಾಕ್ಯವನ್ನು ತಿರಸ್ಕಾರಮಾಡಿದಿ; ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿರದ ಹಾಗೆ ತಿರ ಸ್ಕಾರ ಮಾಡಿಬಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಸಮುವೇಲನು - ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವದಿಲ್ಲ; ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಇಸ್ರಾಯೇಲ್ಯರ ಅರಸುತನದಿಂದ ತಳ್ಳಿಬಿಟ್ಟಿದ್ದಾನೆ ಎಂದು ಹೇಳಿ ತಿರುಗಿಕೊಂಡು ಹೊರಡಲು
Kannada Bible (KNCL) BSI 2016
ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಸರ್ವೇಶ್ವರನ ಮಾತನ್ನು ತಳ್ಳಿಬಿಟ್ಟಿದ್ದರಿಂದ ಅವರು ನಿನ್ನನ್ನು ಇಸ್ರಯೇಲರ ಅರಸುತನದಿಂದ ತಳ್ಳಿಬಿಟ್ಟಿದ್ದಾರೆ,” ಎಂದು ಹೇಳಿ ಹಿಂದಿರುಗಿ ಅಲ್ಲಿಂದ ಹೊರಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಸಮುಯೇಲನು ಸೌಲನಿಗೆ, “ನಾನು ನಿನ್ನ ಸಂಗಡ ಹಿಂದಿರುಗಿ ಬರುವುದಿಲ್ಲ. ಏಕೆಂದರೆ ನೀನು ಯೆಹೋವ ದೇವರ ವಾಕ್ಯವನ್ನು ತಿರಸ್ಕರಿಸಿದ್ದೀ. ಯೆಹೋವ ದೇವರು ನಿನ್ನನ್ನು ಇಸ್ರಾಯೇಲರ ಮೇಲೆ ಅರಸನಾಗಿರದ ಹಾಗೆ ತಿರಸ್ಕಾರಮಾಡಿಬಿಟ್ಟರು,” ಎಂದು ಹೇಳಿದನು.