1 Samuel 17:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು ಇಷಯನ ಮಗ. ಇಷಯನು ಯೆಹೂದ ಪ್ರಾಂತ್ಯದ ಬೆತ್ಲೆಹೇಮಿನ ಎಫ್ರಾತ ವಂಶದವನು. ಇಷಯನಿಗೆ ಎಂಟು ಜನ ಮಕ್ಕಳಿದ್ದರು. ಸೌಲನ ಕಾಲಕ್ಕಾಗಲೇ ಇಷಯನು ಮುದುಕನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನ ಕಾಲದಲ್ಲಿ ಯೆಹೂದ ಬೇತ್ಲೆಹೇಮ್ ಎಂಬ ಊರಿನ ಎಫ್ರಾತ್ಯನಾದ ಇಷಯನೆಂಬ ಒಬ್ಬ ವೃದ್ಧನಿದ್ದನು. ಇವನ ಎಂಟು ಮಂದಿ ಮಕ್ಕಳಲ್ಲಿ ದಾವೀದನು ಒಬ್ಬನು.
Kannada BSI Bible 2016
ದಾವೀದನು ಯೆಹೂದದ ಬೇತ್ಲೆಹೇಮ್‌ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾ ಗಿದ್ದನು. ಈ ಇಷಯನಿಗೆ ಎಂಟು ಮಂದಿ ಕುಮಾರ ರಿದ್ದರು. ಇವನು ಸೌಲನ ದಿವಸಗಳಲ್ಲಿ ಜನರೊಳಗೆ ವೃದ್ಧನಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನು ಸೌಲನ ಕಾಲದಲ್ಲಿ ಬಹು ವೃದ್ಧನಾಗಿದ್ದನು. ಇವನ ಎಂಟು ಮಂದಿ ಮಕ್ಕಳಲ್ಲಿ ದಾವೀದನೆಂಬವನು ಒಬ್ಬನು.
Kannada Bible (KNCL) BSI 2016
ದಾವೀದನು ಜೆಸ್ಸೆಯ ಎಂಬವನ ಮಗ. ಜೆಸ್ಸೆಯ ಯೆಹೂದದ ಬೆತ್ಲೆಹೇಮ್ ಊರಿನ ಎಫ್ರಾತ್ಯನು. ಸೌಲನ ಕಾಲದಲ್ಲಿ ಹಣ್ಣುಹಣ್ಣು ಮುದುಕ. ಇವನ ಎಂಟುಮಂದಿ ಮಕ್ಕಳಲ್ಲಿ ದಾವೀದನು ಒಬ್ಬ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾಗಿದ್ದನು. ಈ ಇಷಯನಿಗೆ ಎಂಟು ಮಂದಿ ಪುತ್ರರಿದ್ದರು. ಸೌಲನ ಕಾಲದಲ್ಲಿ ಇಷಯನು ವೃದ್ಧನಾಗಿದ್ದನು.