1 Samuel 17:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಷಯನ ಮೂವರು ಹಿರಿಯ ಮಕ್ಕಳು ಸೌಲನೊಂದಿಗೆ ಯುದ್ಧಕ್ಕೆ ಹೋಗಿದ್ದರು. ಎಲೀಯಾಬನು ಮೊದಲನೆಯ ಮಗ. ಅಬೀನಾದ್ವಾನು ಎರಡನೆಯ ಮಗ. ಶಮ್ಮನು ಮೂರನೆಯ ಮಗ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನ ಮೂರು ಹಿರಿಯ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ, ಎರಡನೆಯ ಮಗನ ಹೆಸರು ಅಬೀನಾದಾಬ, ಮೂರನೆಯವನ ಹೆಸರು ಶಮ್ಮ,
Kannada BSI Bible 2016
ಇಷಯನ ಮೂವರು ಹಿರೀ ಕುಮಾರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಕುಮಾರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು; ಎರಡನೆ ಯವನ ಹೆಸರು ಅಬೀನಾದಾಬನು, ಮೂರನೆಯವನ ಹೆಸರು ಶಮ್ಮನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನ ಮೂರು ಮಂದಿ ಹಿರೀ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ್; ಮರಚಲ ಮಗನ ಹೆಸರು ಅಬೀನಾದಾಬ್; ಮೂರನೆಯವನ ಹೆಸರು ಶಮ್ಮ. ದಾವೀದನೇ ಎಲ್ಲರಿಗಿಂತಲೂ ಕಿರಿಯವನು.
Kannada Bible (KNCL) BSI 2016
ಇವನ ಮೂರು ಮಂದಿ ಹಿರಿಯ ಮಕ್ಕಳು ಸೌಲನ ಜೊತೆ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ್; ಎರಡನೆಯವನ ಹೆಸರು ಅಬೀನಾದಾಬ್; ಮೂರನೆಯವನು ಶಮ್ಮ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಷಯನ ಮೂವರು ಹಿರಿಯ ಪುತ್ರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಪುತ್ರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು, ಎರಡನೆಯವನ ಹೆಸರು ಅಬೀನಾದಾಬನು; ಮೂರನೆಯವನ ಹೆಸರು ಶಮ್ಮನು;