1 Samuel 17:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗೊಲ್ಯಾತನು ಹೊರಬಂದು ಇಸ್ರೇಲ್ ಸೈನ್ಯಕ್ಕೆ ಎದುರಾಗಿ ನಿಲ್ಲುತ್ತಿದ್ದನು. ಈ ರೀತಿ ಗೊಲ್ಯಾತನು ಇಸ್ರೇಲರನ್ನು ನಲವತ್ತು ದಿನಗಳ ಕಾಲ ಹೀಯಾಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಫಿಲಿಷ್ಟಿಯನು ನಲ್ವತ್ತು ದಿನ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ, ಬಂದು ಅದೇ ಪ್ರಕಾರ ಕೂಗುತ್ತಾ ಸವಾಲು ಹಾಕುತ್ತಾ ಯುದ್ಧಕ್ಕೆ ನಿಲ್ಲುತ್ತಿದ್ದನು.
Kannada BSI Bible 2016
ಫಿಲಿಷ್ಟಿಯನು ಉದ ಯದಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಫಿಲಿಷ್ಟಿಯನು ನಾಲ್ವತ್ತು ದಿವಸ ಹೊತ್ತಾರೆಯಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ಬಂದು ಅದೇ ಪ್ರಕಾರ ಕೂಗುತ್ತಾ ನಿಲ್ಲುತ್ತಿದ್ದನು.
Kannada Bible (KNCL) BSI 2016
ಆ ಫಿಲಿಷ್ಟಿಯನು ನಾಲ್ವತ್ತು ದಿನ, ಬೆಳಿಗ್ಗೆ ಸಂಜೆ, ಒಂದೇ ಸಮನೆ ಸವಾಲು ಹಾಕುತ್ತಾ ಇದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಆ ಫಿಲಿಷ್ಟಿಯನು ಪ್ರತಿ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.