1 Samuel 17:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಸಹೋದರರ ಸಹಸ್ರಾಧಿಪತಿಗೆ ಹತ್ತು ಉಂಡೆ ಗಿಣ್ಣನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರು ಕ್ಷೇಮವಾಗಿದ್ದಾರೆಂಬುದಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಇಲ್ಲಿ ಹತ್ತು ಗಿಣ್ಣದ ಉಂಡೆಗಳಿವೆ, ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
Kannada BSI Bible 2016
ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಸಾವಿರಕ್ಕೆ ಪ್ರಧಾನನಾದವನಿಗೆ ಕೊಟ್ಟು ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ ಅವರ ಗುರುತನ್ನು ತಕ್ಕೊಂಡು ಬಾ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಇಲ್ಲಿ ಹತ್ತು ಗಿಣ್ಣಿನ ಗಡ್ಡೆಗಳಿರುತ್ತವೆ; ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
Kannada Bible (KNCL) BSI 2016
ಇಲ್ಲಿ ಹತ್ತು ಗಿಣ್ಣಿನ ಉಂಡೆಗಳೂ ಇವೆ. ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು, ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಪ್ರಧಾನನಿಗೆ ಕೊಟ್ಟು, ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ, ಅವರ ಗುರುತನ್ನು ತೆಗೆದುಕೊಂಡು ಬಾ,” ಎಂದನು.