1 Samuel 17:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿ ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಅರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ರಥಗಳು ನಿಂತಿದ್ದ ಸ್ಥಳಕ್ಕೆ ಬಂದನು.
Kannada BSI Bible 2016
ದಾವೀದನು ಉದಯದಲ್ಲಿ ಎದ್ದು ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು ತನ್ನ ತಂದೆಯಾದ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತಕ್ಕೊಂಡು ಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ ಸಾಮಗ್ರಿ ಇರುವ ಸ್ಥಳಕ್ಕೆ ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ಮರುದಿನ ಬೆಳಿಗ್ಗೆ ಎದ್ದು ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಆರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು.
Kannada Bible (KNCL) BSI 2016
ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿಗಾಹಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆ ಜೆಸ್ಸೆಯನು ಹೇಳಿದವುಗಳನ್ನು ತೆಗೆದುಕೊಂಡು ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು. ಸೈನ್ಯಗಳು ಯುದ್ಧಘೋಷಣೆಗಳನ್ನು ಹಾಕುವ ಸಮಯ ಅದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಉದಯಕಾಲದಲ್ಲಿ ಎದ್ದು, ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು, ತನ್ನ ತಂದೆ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತೆಗೆದುಕೊಂಡುಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ, ಸಲಕರಣೆಗಳು ಇರುವ ಸ್ಥಳಕ್ಕೆ ಬಂದನು.