1 Samuel 17:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ತಾನು ತಂದವುಗಳನ್ನು ಸಾಮಾನು ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಅವರೊಡನೆ ಮಾತನಾಡುತ್ತಿದ್ದನು.
Kannada BSI Bible 2016
ಆಗ ದಾವೀದನು ತಾನು ತಕ್ಕೊಂಡು ಬಂದದ್ದನ್ನು ಸಾಮಗ್ರಿ ಕಾಯುವವನ ಕೈಯಲ್ಲಿ ಇಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಬಳಿಗೆ ಬಂದು ಅವರನ್ನು ವಂದಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ತಾನು ತಂದವುಗಳನ್ನು ಸಾಮಾನುಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ
Kannada Bible (KNCL) BSI 2016
ಅಷ್ಟರಲ್ಲಿ ದಾವೀದನು ತಾನು ತಂದವುಗಳನ್ನೂ ಆಹಾರಪದಾರ್ಥಗಳನ್ನೂ ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿದನು. ತನ್ನ ಸಹೋದರರ ಯೋಗಕ್ಷೇಮ ವಿಚಾರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದಾವೀದನು ತಾನು ತೆಗೆದುಕೊಂಡು ಬಂದದ್ದನ್ನು, ವಸ್ತುಗಳನ್ನು ಕಾಯುವವನ ಕೈಯಲ್ಲಿ ಇಟ್ಟುಬಿಟ್ಟು, ರಣರಂಗಕ್ಕೆ ಓಡಿಹೋಗಿ, ತನ್ನ ಸಹೋದರರ ಬಳಿಗೆ ಬಂದು, ಯೋಗಕ್ಷೇಮ ವಿಚಾರಿಸಿದನು.