1 Samuel 17:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಷ್ಟರಲ್ಲಿ ಗತ್ ಊರಿನ ಯುದ್ಧವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದು ಮುಂಚಿನಂತೆಯೇ ಕೂಗಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
Kannada BSI Bible 2016
ಅವನು ಇವರ ಸಂಗಡ ಮಾತನಾಡುತ್ತಾ ಇರುವಾಗ ಇಗೋ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು ಮೊದಲಿನ ಹಾಗೆಯೇ ಮಾತನಾಡಿದನು; ಆ ಮಾತುಗಳನ್ನು ದಾವೀದನು ಕೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರೊಡನೆ ಮಾತಾಡುತ್ತಿರುವಷ್ಟರಲ್ಲಿ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದು ಮುಂಚಿನಂತೆಯೇ ಕೂಗಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
Kannada Bible (KNCL) BSI 2016
ಅವರೊಡನೆ ಮಾತಾಡುತ್ತಿರುವಾಗಲೇ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದನು. ಎಂದಿನಂತೆ ಯುದ್ಧ ಸವಾಲನ್ನು ಘೋಷಿಸಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಇವರ ಸಂಗಡ ಮಾತನಾಡಿಕೊಳ್ಳುತ್ತಾ ಇರುವಾಗ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು, ಮೊದಲಿನ ಹಾಗೆಯೇ ಮಾತನಾಡಿದನು. ಆ ಮಾತುಗಳನ್ನು ದಾವೀದನು ಕೇಳಿದನು.