1 Samuel 17:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ನೋಡಿದಿರಾ! ಅವನನ್ನು ನೋಡಿ! ಆ ಗೊಲ್ಯಾತನು ಪ್ರತಿನಿತ್ಯ ಹೊರಗೆ ಬಂದು ಇಸ್ರೇಲರನ್ನು ಮತ್ತೆಮತ್ತೆ ಹಾಸ್ಯಮಾಡುತ್ತಿದ್ದಾನೆ. ಅವನನ್ನು ಕೊಂದವನಿಗೆ ಸೌಲನು ಅಪಾರ ಐಶ್ವರ್ಯವನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಅವನಿಗೆ ಕೊಟ್ಟು ಮದುವೆ ಮಾಡುತ್ತಾನೆ; ಅಲ್ಲದೆ ಅವನ ವಂಶವನ್ನು ಇಸ್ರೇಲಿನಲ್ಲಿ ಸ್ವತಂತ್ರಗೊಳಿಸುತ್ತಾನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು, “ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವುದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ? ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು. ಇದಲ್ಲದೆ ಅವನ ತಂದೆಯ ಕುಟುಂಬವನ್ನು ಎಲ್ಲಾ ತೆರಿಗೆಯಿಂದ ವಿಮೋಚಿಸುವನು” ಎಂದು ಮಾತನಾಡಿಕೊಳ್ಳುತ್ತಿದ್ದರು.
Kannada BSI Bible 2016
ಇಸ್ರಾಯೇಲ್‌ ಮನು ಷ್ಯರು--ಏರಿ ಬಂದ ಈ ಮನುಷ್ಯನನ್ನು ನೋಡಿ ದಿರೋ? ಇಸ್ರಾಯೇಲನ್ನು ಹೀಯಾಳಿಸಲು ಏರಿ ಬಂದಿದ್ದಾನಲ್ಲಾ. ಯಾವನು ಇವನನ್ನು ಕೊಂದುಬಿಡು ವನೋ ಅವನನ್ನು ಅರಸನು ಬಹಳ ಐಶ್ವರ್ಯ ವಂತನಾಗ ಮಾಡಿ ಅವನಿಗೆ ತನ್ನ ಮಗಳನ್ನು ಕೊಟ್ಟು ಅವನ ತಂದೆಯ ಮನೆಯನ್ನು ಇಸ್ರಾಯೇಲ್ಯರಲ್ಲಿ ಸರ್ವ ಮಾನ್ಯವನ್ನು ಕೊಡುವನು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು - ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ! ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು; ಇದಲ್ಲದೆ ಅವನ ಕುಟುಂಬಕ್ಕೆ ಸರ್ವಮಾನ್ಯವನ್ನು ಕೊಡುವನು ಎಂದು ಮಾತಾಡಿಕೊಳ್ಳುತ್ತಿದ್ದರು.
Kannada Bible (KNCL) BSI 2016
“ನೋಡಿದಿರೋ, ಇಸ್ರಯೇಲರಾದ ನಮ್ಮನ್ನು ತೃಣೀಕರಿಸಲು ಬಂದಿರುವ ಈ ವ್ಯಕ್ತಿಯನ್ನು? ಇವನನ್ನು ಕೊಲ್ಲುವವನಿಗೆ ಅರಸ ಅಪಾರ ದ್ರವ್ಯಕೊಡುವರು; ತಮ್ಮ ಮಗಳನ್ನೇ ಕೊಟ್ಟು ಮದುವೆಮಾಡುವರು; ಅಲ್ಲದೆ ಅಂಥವನ ಕುಟುಂಬಕ್ಕೆ ಎಲ್ಲಾ ತೆರಿಗೆ ಕಂದಾಯದಿಂದ ವಿನಾಯಿತಿ ದೊರಕುವುದು,” ಎಂದು ಮಾತಾಡಿಕೊಳ್ಳುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರು, “ಏರಿ ಬಂದ ಈ ಮನುಷ್ಯನನ್ನು ಕಂಡಿರೋ? ಇಸ್ರಾಯೇಲನ್ನು ಪ್ರತಿಭಟಿಸಿ ಏರಿ ಬಂದಿದ್ದಾನಲ್ಲ. ಯಾವನು ಇವನನ್ನು ಕೊಂದು ಬಿಡುವನೋ, ಅವನನ್ನು ಅರಸನು ಬಹಳ ಐಶ್ವರ್ಯವಂತನನ್ನಾಗಿ ಮಾಡಿ, ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುವನು ಮತ್ತು ಅವನ ತಂದೆಯ ಮನೆಯನ್ನು ಇಸ್ರಾಯೇಲರಲ್ಲಿ ತೆರಿಗೆಯಿಂದ ವಿಮೋಚಿಸುವನು,” ಎಂದರು.