1 Samuel 17:32 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಧೈರ್ಯಗೆಡಬಾರದು ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧಮಾಡುವೆನು” ಅನ್ನಲು,
Kannada BSI Bible 2016
ಆಗ ದಾವೀದನು ಸೌಲನಿಗೆ--ಅವನ ನಿಮಿತ್ತ ವಾಗಿ ಯಾವನ ಹೃದಯವು ಕುಗ್ಗಬಾರದು; ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧ ಮಾಡುವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ಸೌಲನಿಗೆ - ಆ ಫಿಲಿಷ್ಟಿಯನ ನಿವಿುತ್ತವಾಗಿ ಯಾವನೂ ಎದೆಗೆಡಬಾರದು; ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧಮಾಡುವೆನು ಅನ್ನಲು ಸೌಲನು ಅವನಿಗೆ -
Kannada Bible (KNCL) BSI 2016
ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತ ಯಾರೂ ಎದೆಗೆಡಬೇಕಾಗಿಲ್ಲ. ತಮ್ಮ ಸೇವಕನಾದ ನಾನೇ ಹೋಗಿ ಅವನೊಡನೆ ಯುದ್ಧಮಾಡುತ್ತೇನೆ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದಾವೀದನು ಸೌಲನಿಗೆ, “ಅವನ ನಿಮಿತ್ತವಾಗಿ ಯಾವ ಹೃದಯವೂ ಕುಗ್ಗಬಾರದು. ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧಮಾಡುವನು,” ಎಂದನು.