1 Samuel 17:38 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಾಮ್ರದ ಶಿರಸ್ತ್ರಾಣವನ್ನು ದಾವೀದನ ತಲೆಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೈಗೆ ತೊಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನಿಗೆ ತನ್ನ ಯುದ್ಧ ವಸ್ತ್ರಗಳನ್ನು, ಕವಚವನ್ನೂ ತೊಣಿಸಿ, ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು.
Kannada BSI Bible 2016
ಆಗ ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ತೊಡಿಸಿ ಅವನ ತಲೆಯ ಮೇಲೆ ಒಂದು ಹಿತ್ತಾಳೆಯ ಶಿರಸ್ತ್ರಾಣವನ್ನು ಇಟ್ಟು ಅವನಿಗೆ ಕವಚವನ್ನು ತೊಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನಿಗೆ ತನ್ನ ಯುದ್ಧವಸ್ತ್ರಗಳನ್ನೂ ಕವಚವನ್ನೂ ತೊಡಿಸಿ ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು;
Kannada Bible (KNCL) BSI 2016
ಅದು ಮಾತ್ರವಲ್ಲ, ತನ್ನ ಯುದ್ಧವಸ್ತ್ರಗಳನ್ನೂ ಕವಚವನ್ನೂ ಅವನಿಗೆ ತೊಡಿಸಿದನು. ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣವನ್ನೂ ಇಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ಧರಿಸಲು ಹೇಳಿ, ಅವನ ತಲೆಯ ಮೇಲೆ ಒಂದು ಕಂಚಿನ ಶಿರಸ್ತ್ರಾಣವನ್ನು ಇಟ್ಟು, ಅವನಿಗೆ ಕವಚವನ್ನು ತೊಡಿಸಿದನು.