1 Samuel 17:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಫಿಲಿಷ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಆತನು ಗತ್ ಊರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯದಿಂದ ಹೊರಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.
Kannada BSI Bible 2016
ಆದರೆ ಗತ್‌ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಉಭಯರ ಮಧ್ಯದಲ್ಲಿ ಒಂದು ತಗ್ಗು ಇತ್ತು. ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.
Kannada Bible (KNCL) BSI 2016
ಫಿಲಿಷ್ಟಿಯರ ಪಾಳೆಯದಿಂದ ಮಹಾ ಪರಾಕ್ರಮಿಯೊಬ್ಬನು ಹೊರಬಂದನು. ಅವನು ಗತ್ ಊರಿನವನು. ಅವನ ಹೆಸರು ಗೊಲ್ಯಾತ್. ಅವನ ಎತ್ತರ ಸುಮಾರು ಮೂರು ಮೀಟರ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಬಂದನು. ಅವನ ಎತ್ತರ ಸುಮಾರು ಮೂರು ಮೀಟರ್.