1 Samuel 17:51 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು ಓಡುತ್ತಾ ಹೋಗಿ ಫಿಲಿಷ್ಟಿಯನ ಪಕ್ಕದಲ್ಲಿ ನಿಂತುಕೊಂಡನು. ದಾವೀದನು ಗೊಲ್ಯಾತನ ಕತ್ತಿಯನ್ನು ಒರೆಯಿಂದ ತೆಗೆದು ಅದೇ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ದಾವೀದನು ಈ ರೀತಿಯಲ್ಲಿ ಗೊಲ್ಯಾತನನ್ನು ಕೊಂದನು. ಫಿಲಿಷ್ಟಿಯರು ತಮ್ಮ ನಾಯಕನು ಸತ್ತದ್ದನ್ನು ನೋಡಿದಾಗ ಹಿಂದಿರುಗಿ ಓಡಿಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ, ಕೊಂದು ಹಾಕಿದನು ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.
Kannada BSI Bible 2016
ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.
Kannada Bible (KNCL) BSI 2016
ಹೀಗೆ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಕಲ್ಲಿನಿಂದ ಆ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಫಿಲಿಷ್ಟಿಯರು ಓಡಿಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನ ಕೈಯಲ್ಲಿ ಖಡ್ಗ ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಖಡ್ಗವನ್ನು ತೆಗೆದುಕೊಂಡು, ಅದನ್ನು ಒರೆಯಿಂದ ಕಿತ್ತು, ಅವನನ್ನು ಕೊಂದು, ಅವನ ತಲೆಯನ್ನು ಕಡಿದುಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತು ಹೋದದ್ದನ್ನು ಕಂಡಾಗ ಓಡಿಹೋದರು.