1 Samuel 17:58 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು. ದಾವೀದನು, “ನಾನು ನಿಮ್ಮ ಸೇವಕನಾದ ಬೆತ್ಲೆಹೇಮಿನ ಇಷಯನ ಮಗ” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನು ಅವನನ್ನು, “ಹುಡುಗನೇ ನೀನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು, “ನಾನು ಬೇತ್ಲೆಹೇಮಿನವನೂ ನಿನ್ನ ಸೇವಕನೂ ಆದ ಇಷಯನ ಮಗನು” ಎಂದು ಉತ್ತರಕೊಟ್ಟನು.
Kannada BSI Bible 2016
ಆಗ ಸೌಲನು--ಯೌವನ ಸ್ತನೇ, ನೀನು ಯಾರ ಮಗನು ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು--ನಾನು ನಿನ್ನ ಸೇವಕ ನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ಅವನನ್ನು - ಹುಡುಗನೇ, ನೀನು ಯಾರ ಮಗನೆಂದು ಕೇಳಿದ್ದಕ್ಕೆ ಅವನು - ನಾನು ಬೇತ್ಲೆಹೇವಿುನವನೂ ನಿನ್ನ ಸೇವಕನೂ ಆದ ಇಷಯನ ಮಗನು ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ಸೌಲನು ಅವನನ್ನು, “ತರುಣನೇ, ನೀನು ಯಾರ ಮಗ?” ಎಂದು ಕೇಳಿದನು. ಅದಕ್ಕೆ ಅವನು, “ನಾನು ಬೆತ್ಲೆಹೇಮಿನವನೂ ನಿಮ್ಮ ಸೇವಕನೂ ಆದ ಜೆಸ್ಸೆಯನ ಮಗ,” ಎಂದು ಉತ್ತರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸೌಲನು, “ಯೌವನಸ್ಥನೇ, ನೀನು ಯಾರ ಮಗನು?” ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು, “ನಾನು ನಿನ್ನ ಸೇವಕನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು,” ಎಂದನು.