1 Samuel 17:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ನಿಂತು ಇಸ್ರಾಯೇಲ ಸೈನ್ಯದವರನ್ನು ಕೂಗಿ ಅವರಿಗೆ, “ನೀವು ಯುದ್ಧಮಾಡಲು ಬಂದದ್ದೇಕೆ? ನಾನು ಫಿಲಿಷ್ಟಿಯನು. ನೀವು ಸೌಲನ ಸೇವಕರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ.
Kannada BSI Bible 2016
ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾ ಯೇಲ್‌ ಸೈನ್ಯದವರಿಗೆ ಕೂಗಿ ಹೇಳಿದ್ದೇನಂದರೆ--ಯಾಕೆ ನೀವು ವ್ಯೂಹ ಕಟ್ಟಲು ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರ ಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆದು ಕೊಳ್ಳಿರಿ; ಅವನು ನನ್ನ ಮುಂದೆ ಬರಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ನಿಂತು ಇಸ್ರಾಯೇಲ್‍ಸೈನ್ಯದವರನ್ನು ಕೂಗಿ ಅವರಿಗೆ - ನೀವು ಯುದ್ಧಮಾಡಬಂದದ್ದೇಕೆ? ನಾನು ಫಿಲಿಷ್ಟಿಯನು, ನೀವು ಸೌಲನ ಸೇವಕರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ;
Kannada Bible (KNCL) BSI 2016
ಗೊಲ್ಯಾತನು ಅಲ್ಲೆ ನಿಂತು, ಇಸ್ರಯೇಲರ ಸೈನ್ಯದತ್ತ ಹೀಗೆಂದು ಗರ್ಜಿಸಿದನು: “ನೀವು ಸಜ್ಜಾಗಿ ಬಂದಿರುವುದು ಯುದ್ಧಮಾಡಲಿಕ್ಕೋ? ನಾನು ಫಿಲಿಷ್ಟಿಯನು. ನೀವು ಆ ಸೌಲನ ಗುಲಾಮರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾಯೇಲ್ ಸೈನ್ಯಗಳಿಗೆ ಕೂಗಿ ಹೇಳಿದ್ದೇನೆಂದರೆ, “ಏಕೆ ನೀವು ವ್ಯೂಹ ಕಟ್ಟಿಕೊಳ್ಳ ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆಯ್ದುಕೊಳ್ಳಿರಿ. ಅವನು ನನ್ನ ಮುಂದೆ ಬರಲಿ.