1 Samuel 17:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಕೊಂದರೆ ನಾವು ನಿಮಗೇ ದಾಸರಾಗಿರುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ಆಗ ನೀವು ನಮ್ಮ ಗುಲಾಮರಾಗಿ ನಮ್ಮನ್ನು ಸೇವೆಮಾಡುವವರಾಗುವಿರಿ” ಎಂದು ಹೇಳಿದನು.
Kannada BSI Bible 2016
ಅವನು ನನ್ನ ಸಂಗಡ ಯುದ್ಧ ಮಾಡಬಲ್ಲವನಾಗಿದ್ದು ನನ್ನನ್ನು ಕೊಂದರೆ ನಾವು ನಿಮಗೆ ಸೇವಕರಾಗಿರುವೆವು; ನಾನು ಅವನ ಸಂಗಡ ಯುದ್ಧಮಾಡಬಲ್ಲವನಾಗಿದ್ದು ಅವನನ್ನು ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಸೋಲಿಸಿ ಕೊಂದರೆ ನಮ್ಮವರು ನಿಮ್ಮ ಸೇವಕರಾಗುವರು; ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮ್ಮ ದಾಸರಾಗಿ ನಮ್ಮನ್ನು ಸೇವಿಸಬೇಕು ಎಂದು ಹೇಳಿದನು.
Kannada Bible (KNCL) BSI 2016
ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಕೊಲ್ಲಲಿ; ಆಗ ನಮ್ಮವರು ನಿಮ್ಮ ಗುಲಾಮರಾಗುವರು. ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಗುಲಾಮರಾಗಿ ನಮಗೆ ಸೇವೆಮಾಡಬೇಕು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ನನ್ನ ಸಂಗಡ ಯುದ್ಧಮಾಡಿ ನನ್ನನ್ನು ಕೊಂದರೆ, ನಾವು ನಿಮಗೆ ಸೇವಕರಾಗುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು,” ಎಂದನು.