1 Samuel 18:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು.
Kannada BSI Bible 2016
ಆದದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು ಸಾವಿರ ಜನಕ್ಕೆ ಪ್ರಧಾನನನ್ನಾಗಿ ಮಾಡಿದನು. ಹಾಗೆಯೇ ಅವನು ಜನರ ಮುಂದೆ ಹೊರಟು ಹೋಗುತ್ತಾ ಬರುತ್ತಾ ಇದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇವಿುಸಿದನು; ಇವನು ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದನು.
Kannada Bible (KNCL) BSI 2016
ಅವನನ್ನು ತನ್ನ ಸಾನ್ನಿಧ್ಯ ಸೇವೆಯಿಂದ ತೆಗೆದು ಸೈನ್ಯದ ಒಬ್ಬ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ದಾವೀದನು ದಳಪತಿಯಾಗಿ ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಸೌಲನು ಅವನನ್ನು ತನ್ನ ಬಳಿಯಿಂದ ಹೊರಡಿಸಿಬಿಟ್ಟು, ಸಾವಿರ ಜನರಿಗೆ ಪ್ರಧಾನನ್ನಾಗಿ ಮಾಡಿದನು. ಹಾಗೆಯೇ ಅವನು ದಳಪತಿಯಾಗಿ ಸೈನಿಕರನ್ನು ಕರೆದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.