1 Samuel 18:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನ ಮಗಳಾದ ಮೇರಾಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೆಹೋಲದ ಅದ್ರೀಯೇಲನಿಗೆ ಮದುವೆ ಮಾಡಿಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು.
Kannada BSI Bible 2016
ಆದರೆ ಸೌಲನ ಮಗಳಾದ ಮೇರಬಳು ದಾವೀದನಿಗೆ ಕೊಡಲ್ಪಡುವದಕ್ಕಿರುವಾಗ ಅವಳು ಮೆಹೋಲದವನಾದ ಅದ್ರೀಯೇಲನಿಗೆ ಹೆಂಡತಿಯಾಗಿ ಕೊಡಲ್ಪಟ್ಟಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ್ ಎಂಬವನಿಗೆ ಮದುವೆಮಾಡಿಕೊಟ್ಟನು.
Kannada Bible (KNCL) BSI 2016
ಮದುವೆಮಾಡಿಕೊಡುವ ಸಮಯ ಬಂದಾಗ ಸೌಲನು ತನ್ನ ಮಗಳು ಮೇರಬಳನ್ನು ದಾವೀದನಿಗೆ ಬದಲಾಗಿ, ಮೆಹೋಲದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಮದುವೆಮಾಡಿಕೊಡುವ ಸಮಯ ಬಂದಾಗ, ಅವಳನ್ನು ಮೆಹೋಲದವನಾದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.