1 Samuel 18:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.
Kannada BSI Bible 2016
ಇದಲ್ಲದೆ ಸೌಲನ ಮಗಳಾದ ವಿಾಕಲಳು ದಾವೀದನನ್ನು ಪ್ರೀತಿಮಾಡಿದಳು. ಅದು ಸೌಲನಿಗೆ ತಿಳಿಸಲ್ಪಟ್ಟಾಗ ಆ ಕಾರ್ಯ ಅವನಿಗೆ ಯುಕ್ತವಾಗಿ ತೋರಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.
Kannada Bible (KNCL) BSI 2016
ಇತ್ತ ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸತೊಡಗಿದಳು. ಈ ವಿಷಯ ಸೌಲನಿಗೆ ತಿಳಿದುಬಂದಾಗ ಅವನಿಗೆ ಸಂತೋಷ ಆಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಅದು ಸೌಲನಿಗೆ ತಿಳಿದುಬಂದಾಗ, ಆ ಕಾರ್ಯವು ಅವನಿಗೆ ಮೆಚ್ಚಿಕೆಯಾಯಿತು.