1 Samuel 18:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫಿಲಿಷ್ಟಿಯ ಸೇನಾಧಿಪತಿಗಳು ಇಸ್ರೇಲರೊಂದಿಗೆ ಹೋರಾಡಲು ಹೋಗುತ್ತಲೇ ಇದ್ದರು. ಆದರೆ ದಾವೀದನು ಪ್ರತಿಸಲವೂ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನ ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ದಾವೀದನು ಪ್ರಖ್ಯಾತನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.
Kannada BSI Bible 2016
ಆಗ ಫಿಲಿಷ್ಟಿಯರ ಪ್ರಧಾನರು ಹೊರಟರು, ಅವರು ಹೊರಟ ತರುವಾಯ ದಾವೀದನು ಸೌಲನ ಸಮಸ್ತ ಸೇವಕ ರಿಗಿಂತ ಹೆಚ್ಚು ಬುದ್ಧಿಯಿಂದ ನಡಕೊಂಡನು. ಆದದ ರಿಂದ ಅವನ ಹೆಸರು ಬಹಳ ಪ್ರಸಿದ್ಧವಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫಿಲಿಷ್ಟಿಯಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಪತಿಗಳಲ್ಲಿ ದಾವೀದನೇ ಅಧಿಕಜಯಶೀಲನಾಗಿ ಬರುತ್ತಿದ್ದದರಿಂದ ಅವನ ಹೆಸರು ಬಹು ಪ್ರಸಿದ್ಧವಾಯಿತು.
Kannada Bible (KNCL) BSI 2016
ಫಿಲಿಷ್ಟಿಯ ರಾಜರು ಯುದ್ಧಕ್ಕೆ ಬಂದಾಗಲೆಲ್ಲ ಸೌಲನ ಸೇನಾಪತಿಗಳಲ್ಲಿ ದಾವೀದನೇ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಈ ಕಾರಣ ಅವನ ಹೆಸರು ಸುಪ್ರಸಿದ್ಧವಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫಿಲಿಷ್ಟಿಯರ ಪ್ರಧಾನರು ಯುದ್ಧಕ್ಕೆ ಬರುತ್ತಿದ್ದರು. ಅವರು ಹೊರಟು ಬಂದಾಗಲೆಲ್ಲಾ ದಾವೀದನು ಸೌಲನ ಸಮಸ್ತ ಸೇನಾಪತಿಗಳಿಗಿಂತ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಆದ್ದರಿಂದ ಅವನ ಹೆಸರು ಬಹು ಪ್ರಸಿದ್ಧವಾಯಿತು.