1 Samuel 18:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಸನಗೊಂಡನು ಮತ್ತು ರೋಷಗೊಂಡನು. “ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು ಎಂದು ಇವರು ಹಾಡುತ್ತಾರಲ್ಲಾ, ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಏನು ಕಡಿಮೆಯಾಯಿತು?” ಎಂದು ಆಲೋಚಿಸತೊಡಗಿದನು. “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಚಿಂತೆಗೀಡಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು
Kannada BSI Bible 2016
ಸೌಲನಿಗೆ ಬಹು ಕೋಪವಾಯಿತು; ಆ ಮಾತು ಅವನಿಗೆ ವ್ಯಸನಕರವಾಗಿತ್ತು. ಇವರು ದಾವೀದ ನಿಗೆ ಹತ್ತು ಸಾವಿರಗಳನ್ನು ಹೇಳಿದ್ದಾರೆ; ನನಗೆ ಸಾವಿರ ಗಳನ್ನು ಹೇಳಿದ್ದಾರೆ; ಅವನಿಗೆ ರಾಜ್ಯವಲ್ಲದೆ ಇನ್ನು ಹೆಚ್ಚು ಬೇಕಾದದ್ದೇನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹುವ್ಯಸನವೂ ಕೋಪವೂ ಉಂಟಾಗಿ ಅವನು - ದಾವೀದನು ಹತ್ತು ಸಾವಿರ ಗಟ್ಟಳೆಯಾಗಿ ಕೊಂದನೆಂದೂ ನಾನು ಸಾವಿರಗಟ್ಟಳೆಯಾಗಿ ಕೊಂದೆನೆಂದೂ ಹಾಡುತ್ತಾರಲ್ಲಾ! ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾದ ಹಾಗಾಯಿತು ಅಂದುಕೊಂಡು
Kannada Bible (KNCL) BSI 2016
ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ, “ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಮಾತ್ರ ಕೊಂದೆನೆಂದು ಹಾಡುತ್ತಾರಲ್ಲಾ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!” ಎಂದುಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದರಿಂದ ಸೌಲನಿಗೆ ಬಹು ಕೋಪವಾಯಿತು. ಆ ಹಾಡಿನಿಂದ ಅವನಿಗೆ ಬಹುಬೇಸರವಾಯಿತು. “ಇವರು ದಾವೀದನಿಗೆ ಹತ್ತು ಸಾವಿರಗಳಷ್ಟು ಎಂದು ಹಾಡಿದ್ದಾರೆ; ನನಗೆ ಸಾವಿರಗಳಷ್ಟೇ ಎಂದು ಹಾಡಿದ್ದಾರೆ; ಹಾಗಾದರೆ, ಅವನಿಗೆ ರಾಜ್ಯವಲ್ಲದೆ ಇನ್ನು ಆಗಬೇಕಾದದ್ದೇನು?” ಎಂದುಕೊಂಡನು.