1 Samuel 19:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹೋಗಿ ನೋಡಲು ಹಾಸಿಗೆಯ ಮೇಲಿರುವುದು ಮೇಕೆಕೂದಲಿನಿಂದ ಹೆಣೆದ ಜಾಲರಿಯ ಒಂದು ವಿಗ್ರಹ ಎಂದು ತಿಳಿದುಬಂತು.
Kannada BSI Bible 2016
ಹಾಗೆಯೇ ಸೇವಕರು ಬಂದು ನೋಡಿ ದಾಗ ಇಗೋ, ಗೊಂಬೆಯು ಮಂಚದ ಮೇಲೆ ಇತ್ತು;
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹೋಗಿ ನೋಡಲು ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯುಳ್ಳದ್ದಾಗಿ ಹಾಸಿಗೆಯ ಮೇಲಿರುವದು ಒಂದು ಬೊಂಬೆಯೆಂದು ತಿಳಿದುಬಂದಾಗ
Kannada Bible (KNCL) BSI 2016
ಅವರು ಹೋಗಿ ನೋಡಲು, ಮುಖದ ಕಡೆ ಮೇಕೆಕೂದಲಿನಿಂದ ಮಾಡಿದ ದಿಂಬಾಗಿತ್ತು. ಹಾಸಿಗೆಯ ಮೇಲಿದ್ದುದು ಒಂದು ಗೊಂಬೆಯೆಂದು ತಿಳಿದುಬಂದಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.