1 Samuel 19:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ಸೌಲನು ರಾಮದ ಹತ್ತಿರವಿರುವ ಪಾಳೆಯಕ್ಕೆ ಹೋದನು. ದೇವರಾತ್ಮವು ಸೌಲನ ಮೈಮೇಲೂ ಬಂದಿತು. ಅವನೂ ಪ್ರವಾದಿಸಲಾರಂಭಿಸಿದನು. ಸೌಲನು ರಾಮದ ಪಾಳೆಯದವರೆಗೂ ಪ್ರವಾದಿಸುತ್ತಾ ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಅಲ್ಲಿಂದ ರಾಮದ ನಯೋತಿಗೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವ ತನಕ ಪ್ರವಾದಿಸುತ್ತಾ ಹೋದನು.
Kannada BSI Bible 2016
ಹಾಗೆಯೇ ಅವನು ರಾಮದ ನಯೋತಿಗೆ ಹೋದನು; ಆಗ ದೇವರ ಆತ್ಮ ಅವನ ಮೇಲೆ ಬಂದನು; ಅವನು ರಾಮದ ನಯೋತಿಗೆ ಸೇರುವ ವರೆಗೂ ಪ್ರವಾದಿಸುತ್ತಾ ಬಂದನು.ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ ತಾನೂ ಹಾಗೆಯೇ ಸಮುವೇಲನ ಮುಂದೆ ಪ್ರವಾದಿಸಿದನು; ಆ ದಿನ ಹಗಲೆಲ್ಲವೂ ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದದರಿಂದ--ಸೌಲನು ಕೂಡಾ ಪ್ರವಾದಿ ಗಳಲ್ಲಿ ಇದ್ದಾನೋ ಅನ್ನುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅಲ್ಲಿಂದ ರಾಮದ ಮಠಕ್ಕೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವವರೆಗೆ ಪರವಶನಾಗಿ ಮಾತಾಡುತ್ತಾ ಹೋದನು.
Kannada Bible (KNCL) BSI 2016
ಅವನು ಅಲ್ಲಿಂದ ರಾಮಾದ ಮಠಕ್ಕೆ ಹೋಗುವಾಗ ದೇವರ ಆತ್ಮ ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವವರೆಗೆ ಪರವಶನಾಗಿ ಮಾತಾಡುತ್ತಾ ಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು.