1 Samuel 2:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ತಾಯಿಯು ಪ್ರತಿವರ್ಷವೂ ತನ್ನ ಗಂಡನ ಜೊತೆಯಲ್ಲಿ ಯಜ್ಞವನ್ನರ್ಪಿಸುವುದಕ್ಕೆ ಬರುವಾಗ ಒಂದು ಚಿಕ್ಕ ಅಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
Kannada BSI Bible 2016
ಇದಲ್ಲದೆ ಅವನ ತಾಯಿ ಪ್ರತಿ ವರುಷದಲ್ಲೂ ವರುಷದ ಬಲಿಯನ್ನು ಅರ್ಪಿಸಲು ತನ್ನ ಗಂಡನ ಸಂಗಡ ಬರುವಾಗ ಅವನಿಗೆ ಒಂದು ಚಿಕ್ಕ ನಿಲುವಂಗಿಯನ್ನು ಮಾಡಿಕೊಂಡು ಬರುತಿದ್ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ತಾಯಿಯು ಪ್ರತಿವರುಷವೂ ಗಂಡನ ಜೊತೆಯಲ್ಲಿ ಯಜ್ಞವನ್ನರ್ಪಿಸುವದಕ್ಕೆ ಬಂದಾಗ ಒಂದು ಚಿಕ್ಕ ಅಂಗಿಯನ್ನು ಹೊಲಿದು ಅವನಿಗೆ ತಂದು ಕೊಡುತ್ತಿದ್ದಳು.
Kannada Bible (KNCL) BSI 2016
ಅವನ ತಾಯಿ ಪ್ರತಿವರ್ಷ ಗಂಡನ ಜೊತೆಯಲ್ಲಿ ಬಲಿಯನ್ನು ಅರ್ಪಿಸುವುದಕ್ಕೆ ಬಂದಾಗ ಒಂದು ಚಿಕ್ಕ ನಿಲುವಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ತಾಯಿ ಪ್ರತಿ ವರುಷದಲ್ಲೂ ವರುಷದ ಬಲಿಯನ್ನು ಅರ್ಪಿಸಲು ತನ್ನ ಗಂಡನ ಸಂಗಡ ಬರುವಾಗ, ಅವನಿಗೆ ಒಂದು ಚಿಕ್ಕ ನಿಲುವಂಗಿಯನ್ನು ಮಾಡಿಕೊಂಡು ಬರುವಳು.