1 Samuel 2:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು. ಆತನು ಅವರನ್ನು ಎಡವದಂತೆ ಕಾಪಾಡುವನು. ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು. ಅವರ ಶಕ್ತಿ ಅವರಿಗೆ ಜಯನೀಡಲಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಆತನು ತನ್ನ ನಂಬಿಗಸ್ತ ಭಕ್ತರ ಹೆಜ್ಜೆಗಳನ್ನು ಕಾಯುವನು; ಆದರೆ ದುಷ್ಟರನ್ನು ಅಂಧಕಾರದ ಮೌನದಲ್ಲಿ ಮುಳುಗಿಸುವನು, ಭುಜಬಲದಿಂದಲೇ ಯಾವನೂ ಜಯಹೊಂದಲಾರನು.
Kannada BSI Bible 2016
ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ತನ್ನ ಭಕ್ತರ ಹೆಜ್ಜೆಗಳನ್ನು ಕಾಯುವನು; ದುಷ್ಟರು ಅಂಧಕಾರದಲ್ಲಿ ಮುಳುಗಿ ಮೌನಹೊಂದುವರು. ಬಾಹುಬಲದಿಂದಲೇ ಯಾವನೂ ಜಯಹೊಂದಲಾರನು.
Kannada Bible (KNCL) BSI 2016
ಕಾಯುವನಾತ ತನ್ನ ಭಕ್ತರನು ಹೆಜ್ಜೆ ಹೆಜ್ಜೆಗು ದುರುಳರಾದರೋ ಮುಳುಗಿ ಮೌನ ತಾಳುವರು ಅಂಧಕಾರದೊಳು. ಕೇವಲ ಭುಜಬಲದಿಂದ ಜಯಹೊಂದಲಾರನು ನರಮಾನವನು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತಮ್ಮ ಪರಿಶುದ್ಧರ ಪಾದಗಳನ್ನು ಕಾಯುವರು. ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು. “ತನ್ನ ಶಕ್ತಿಯಿಂದ ಒಬ್ಬನೂ ಜಯಿಸನು.