1 Samuel 20:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ತಂದೆಯು ನಿನಗೆ ಕೇಡುಮಾಡುವ ಮನಸ್ಸುಳ್ಳವನಾಗಿದ್ದಾನೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ, ನೀನು ತಪ್ಪಿಸಿಕೊಂಡು ಸುರಕ್ಷಿತವಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ, ಆತನು ನನ್ನ ತಂದೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರಲಿ.
Kannada BSI Bible 2016
ಆದರೆ ನಿನಗೆ ಕೇಡುಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ ಅದನ್ನು ನಿನಗೆ ತಿಳಿಸಿ ನೀನು ಸಮಾಧಾನ ದಿಂದ ಹೋಗುವ ಹಾಗೆ ನಿನ್ನನ್ನು ಕಳುಹಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ತಂದೆಯು ನಿನಗೆ ಕೇಡುಮಾಡ ಮನಸ್ಸುಳ್ಳವನಾಗಿದ್ದಾನೆಂದು ಗೊತ್ತಾದರೆ ಅದನ್ನೂ ನಿನಗೆ ತಿಳಿಸಿ ನೀನು ತಪ್ಪಿಸಿಕೊಂಡು ಸುರಕ್ಷಿತನಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ. ಆತನು ನನ್ನ ತಂದೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರಲಿ.
Kannada Bible (KNCL) BSI 2016
ನನ್ನ ತಂದೆ ನಿನಗೆ ಕೇಡುಮಾಡಲು ಮನಸ್ಸುಮಾಡಿದ್ದಾರೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ ನೀನು ತಪ್ಪಿಸಿಕೊಂಡು ಸುರಕ್ಷಿತನಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ, ಸರ್ವೇಶ್ವರ ನನಗೆ ಏನು ಬೇಕಾದರೂ ಮಾಡಲಿ. ಅವರು ನನ್ನ ತಂದೆಯೊಂದಿಗೆ ಇದ್ದಹಾಗೆ ನಿನ್ನೊಂದಿಗೂ ಇರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.