1 Samuel 20:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಕುಟುಂಬದ ಮೇಲೆ ಶಾಶ್ವತವಾಗಿ ನಿನ್ನ ದಯೆಯಿರಲಿ. ಭೂಮಿಯ ಮೇಲಿರುವ ನಿನ್ನ ಶತ್ರುಗಳೆಲ್ಲರನ್ನೂ ಯೆಹೋವನು ನಾಶಪಡಿಸುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಸತ್ತನಂತರ ನನ್ನ ಮನೆಯ ಮೇಲೆಯೂ ಶಾಶ್ವತವಾದ ನಿನ್ನ ದಯೆಯಿರಲಿ. ಯೆಹೋವನು ನಿನ್ನ ಎಲ್ಲಾ ಶತ್ರುಗಳನ್ನು ಭೂಮಿಯಿಂದ ತೆಗೆದು ಹಾಕಿದರೂ ಅದು ನನ್ನ ಮನೆಯಿಂದ ಅಗಲದಿರಲಿ.
Kannada BSI Bible 2016
ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಸತ್ತನಂತರ ನನ್ನ ಮನೆಯ ಮೇಲೆಯೂ ಶಾಶ್ವತವಾಗಿ ನಿನ್ನ ದಯವಿರಲಿ. ಯೆಹೋವನು ನಿನ್ನ ಎಲ್ಲಾ ಶತ್ರುಗಳನ್ನು ಭೂವಿುಯಿಂದ ತೆಗೆದುಹಾಕಿದ ಮೇಲಾದರೂ ಅದು ನನ್ನ ಮನೆಯಿಂದ ಅಗಲದಿರಲಿ.
Kannada Bible (KNCL) BSI 2016
ನಾನು ಸತ್ತನಂತರ ನನ್ನ ಮನೆಯ ಮೇಲೂ ಶಾಶ್ವತವಾಗಿ ನಿನ್ನ ದಯೆಯಿರಲಿ. ಸರ್ವೇಶ್ವರ ನಿನ್ನ ಶತ್ರುಗಳನ್ನೆಲ್ಲ ಭೂಮಿಯಿಂದ ತೆಗೆದುಹಾಕಿದ ಮೇಲೂ ಅದು ನನ್ನ ಮನೆಯಿಂದ ಅಗಲದಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ, ಎಂದಿಗೂ ನಿನ್ನ ದಯೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು,” ಎಂದನು.