1 Samuel 20:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋನಾತಾನನು, “ಎಂದಿಗೂ ಇಲ್ಲ. ನನ್ನ ತಂದೆಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ! ನನ್ನ ತಂದೆಯು ನನಗೆ ತಿಳಿಸದೆ ಏನನ್ನೂ ಮಾಡುವುದಿಲ್ಲ. ಅದು ಬಹು ಮುಖ್ಯವಾದದ್ದೇ ಆಗಿರಲಿ ಇಲ್ಲವೆ ಮುಖ್ಯವಾಗಿಲ್ಲದ್ದೇ ಆಗಿರಲಿ, ನನ್ನ ತಂದೆಯು ನನಗೆ ತಿಳಿಸೇ ತಿಳಿಸುತ್ತಾನೆ. ನನ್ನ ತಂದೆಯು ನಿನ್ನನ್ನು ಕೊಲ್ಲಬೇಕೆಂದಿದ್ದರೆ ನಾನು ನಿನಗೆ ತಿಳಿಸುತ್ತಿರಲಿಲ್ಲವೇ?” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋನಾತಾನನು ಅವನಿಗೆ, “ಇದು ಆಗಲೇಬಾರದು, ನಿನಗೆ ಮರಣವಾಗಕೂಡದು. ನನ್ನ ತಂದೆಯು ಅಲ್ಪಕಾರ್ಯವನ್ನಾಗಲಿ, ಮಹಾಕಾರ್ಯವನ್ನಾಗಲಿ ನನಗೆ ತಿಳಿಸದೇ ಮಾಡುವುದಿಲ್ಲ. ಈ ಕಾರ್ಯವನ್ನು ನನಗೆ ಹೇಗೆ ಮರೆಮಾಡಲು ಸಾಧ್ಯ?” ಎಂದು ಹೇಳಿದನು.
Kannada BSI Bible 2016
ಅವನು ಇವನಿಗೆ--ಅದು ಆಗಬಾರದು; ನೀನು ಸಾಯುವದಿಲ್ಲ; ಇಗೋ, ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ ದೊಡ್ಡ ಕಾರ್ಯವನ್ನಾದರೂ ಮಾಡುವದಿಲ್ಲ. ಈ ಕಾರ್ಯವನ್ನು ಯಾಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದು ಆಗಲೇಬಾರದು; ನಿನಗೆ ಮರಣವಾಗಕೂಡದು, ನನ್ನ ತಂದೆಯು ಅಲ್ಪಕಾರ್ಯವನ್ನಾಗಲಿ ಅಧಿಕಕಾರ್ಯವನ್ನಾಗಲಿ ನನಗೆ ತಿಳಿಸದೆ ಮಾಡುವದಿಲ್ಲ; ಈ ಕಾರ್ಯವನ್ನು ನನಗೆ ಹೇಗೆ ಮರೆಮಾಡಾನು? ಆಗುವದಿಲ್ಲ ಎಂದು ಹೇಳಿದನು.
Kannada Bible (KNCL) BSI 2016
ಯೋನಾತಾನನು ಅವನಿಗೆ, “ಇದು ಎಂದಿಗೂ ಆಗಲೇಬಾರದು; ನಿನಗೆ ಮರಣವಾಗಕೂಡದು. ನನ್ನ ತಂದೆ ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ನನಗೆ ತಿಳಿಸದೆ ಮಾಡುವುದಿಲ್ಲ; ಇಂಥ ಕಾರ್ಯವನ್ನು ನನಗೆ ಹೇಗೆ ಮರೆಮಾಡಿಯಾರು? ಇಲ್ಲ, ಇದು ನಿಜವಲ್ಲ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋನಾತಾನನು ಅವನಿಗೆ, “ಅದು ಆಗಬಾರದು. ನೀನು ಸಾಯುವುದಿಲ್ಲ; ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ, ದೊಡ್ಡ ಕಾರ್ಯವನ್ನಾದರೂ ಮಾಡುವುದಿಲ್ಲ. ಈ ಕಾರ್ಯವನ್ನು ಯಾತಕ್ಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು,” ಎಂದನು.