1 Samuel 20:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಅಲ್ಲಿ ತೊಂದರೆಯಿರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹಳ ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೆಹೋವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ, ‘ಬಾಣಗಳು ಆಚೆ ಬಿದ್ದಿರುತ್ತವೆ’ ಎಂದು ಹೇಳಿದರೆ ಹೊರಟುಹೋಗು, ನೀನು ಹೋಗುವುದೇ ಯೆಹೋವನ ಚಿತ್ತವಾಗಿದೆ.
Kannada BSI Bible 2016
ಆದರೆ--ಇಗೋ, ಬಾಣ ಗಳು ಆಚೆ ಬಿದ್ದಿರುತ್ತವೆ ಎಂದು ಹುಡುಗನಿಗೆ ಹೇಳಿದರೆ ಹೊರಟುಹೋಗು; ಯಾಕಂದರೆ ಕರ್ತನು ನಿನ್ನನ್ನು ಕಳುಹಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ - ಬಾಣಗಳು ಆಚೆ ಬಿದ್ದಿರುತ್ತವೆ ಎಂದು ಹೇಳಿದರೆ ಹೊರಟುಹೋಗು; ನೀನು ಹೋಗುವದೇ ಯೆಹೋವನ ಚಿತ್ತವಾಗಿದೆ.
Kannada Bible (KNCL) BSI 2016
ಆದರೆ, ‘ಬಾಣಗಳು ಆಚೆ ಬಿದ್ದಿರುತ್ತವೆ,’ ಎಂದು ಹೇಳಿದರೆ ಹೊರಟುಹೋಗು. ನೀನು ಹೋಗುವುದೇ ಸರ್ವೇಶ್ವರನ ಚಿತ್ತ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ, ‘ಇಗೋ, ಬಾಣಗಳು ನಿನ್ನ ಆಚೆ ಬಿದ್ದಿವೆ,’ ಎಂದು ಹುಡುಗನಿಗೆ ಹೇಳಿದರೆ, ಹೊರಟು ಹೋಗು. ಏಕೆಂದರೆ ಯೆಹೋವ ದೇವರು ನಿನ್ನನ್ನು ದೂರ ಕಳುಹಿಸಿದರು.