1 Samuel 20:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು ಆ ದಿನ ಏನನ್ನೂ ಹೇಳದೆ, “ದಾವೀದನಿಗೆ ಏನೋ ಸಂಭವಿಸಿರಬಹುದು ಆದ್ದರಿಂದ ಅವನು ಇಂದು ಶುದ್ಧನಾಗಿರಲಿಕ್ಕಿಲ್ಲ” ಎಂದು ಯೋಚಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನ ಅವನ ವಿಷಯ ಏನೂ ಹೇಳಲಿಲ್ಲ. ಅವನಿಗೆ ಏನಾದರೂ ಸಂಭವಿಸಿರಬೇಕು. ಅವನು ಹೊಲೆಯಾಗಿದ್ದಾನು, ತನ್ನನ್ನು ಇನ್ನು ಶುದ್ಧಪಡಿಸಿಕೊಳ್ಳದೆ ಇರಬಹುದು ಅಂದುಕೊಂಡನು.
Kannada BSI Bible 2016
ದಾವೀದನು ಇರುವ ಸ್ಥಳವು ಬರಿದಾಗಿತ್ತು. ಆದಾಗ್ಯೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿದ್ದಾನೆ, ನಿಶ್ಚಯವಾಗಿ ಅಶುಚಿಯಾಗಿದ್ದಾನೆ ಎಂದು ಅಂದುಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿವಸ ಅವನ ವಿಷಯ ಏನೂ ಹೇಳಲಿಲ್ಲ. ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಹೊಲೆಯಾಗಿದ್ದಾನು, ತನ್ನನ್ನು ಇನ್ನೂ ಶುದ್ಧಪಡಿಸಿಕೊಳ್ಳದೆ ಇರಬಹುದು ಅಂದುಕೊಂಡನು.
Kannada Bible (KNCL) BSI 2016
ಆ ದಿವಸ ಅವನ ವಿಷಯವಾಗಿ ಏನೂ ಹೇಳಲಿಲ್ಲ. “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಹೊಲೆಯಾಗಿರಬಹುದು, ತನ್ನನ್ನು ಇನ್ನೂ ಶುದ್ಧಪಡಿಸಿಕೊಳ್ಳದೆ ಇರಬಹುದು,” ಎಂದುಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ, “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿರಬಹುದು; ನಿಶ್ಚಯವಾಗಿ ಅಶುಚಿಯಾಗಿದ್ದಾನೆ,” ಎಂದು ಹೇಳಿಕೊಂಡನು.