1 Samuel 20:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋನಾತಾನನೇ, ನನ್ನ ಮೇಲೆ ದಯೆಯಿರಲಿ. ನಾನು ನಿನ್ನ ಸೇವಕ. ನೀನು ಯೆಹೋವನ ಮುಂದೆ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವೆ. ನಾನು ತಪ್ಪಿತಸ್ಥನಾಗಿದ್ದರೆ, ನೀನೇ ನನ್ನನ್ನು ಕೊಂದುಬಿಡು! ಆದರೆ ನಿನ್ನ ತಂದೆಯ ಹತ್ತಿರಕ್ಕೆ ನನ್ನನ್ನು ಕರೆದೊಯ್ಯಬೇಡ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಯೆಹೋವನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿಯಲ್ಲಾ, ನಾನು ಅಪರಾಧಿಯಾಗಿದ್ದರೆ ನನ್ನನ್ನು ನಿನ್ನ ತಂದೆಗೆ ಒಪ್ಪಿಸುವುದೇಕೆ? ನೀನೇ ನನ್ನನ್ನು ಕೊಂದುಹಾಕು” ಎಂದು ಹೇಳಿದನು.
Kannada BSI Bible 2016
ಆದದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು; ಯಾಕಂದರೆ ಕರ್ತನ ಒಡಂಬಡಿಕೆ ಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀ ಯಲ್ಲಾ. ಆದಾಗ್ಯೂ ನನ್ನಲ್ಲಿ ಅಕ್ರಮವಿದ್ದರೆ ನೀನೇ ನನ್ನನ್ನು ಕೊಂದುಹಾಕು; ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವದು ಯಾಕೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೇವಕನ ಮೇಲೆ ದಯವಿರಲಿ. ನೀನು ಯೆಹೋವನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿಯಲ್ಲಾ; ನಾನು ಅಪರಾಧಿಯಾಗಿದ್ದರೆ ನನ್ನನ್ನು ನಿನ್ನ ತಂದೆಗೆ ಒಪ್ಪಿಸುವದೇಕೆ? ನೀನೇ ಕೊಂದುಹಾಕು ಎಂದು ಹೇಳಿದನು.
Kannada Bible (KNCL) BSI 2016
ಸೇವಕನ ಮೇಲೆ ದಯವಿರಲಿ. ನೀನು ಸರ್ವೇಶ್ವರನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿರುವೆಯಲ್ಲವೆ? ನಾನು ಅಪರಾಧಿಯಾಗಿದ್ದರೆ, ನನ್ನನ್ನು ನಿನ್ನ ತಂದೆಗೆ ಒಪ್ಪಿಸಬೇಕಾಗಿಲ್ಲ, ನೀನೆ ಕೊಂದುಹಾಕು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು. ಏಕೆಂದರೆ ಯೆಹೋವ ದೇವರ ಒಡಂಬಡಿಕೆಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀಯಲ್ಲಾ. ಆದರೂ ನನ್ನಲ್ಲಿ ಅಕ್ರಮವಿದ್ದರೆ, ನೀನೇ ನನ್ನನ್ನು ಕೊಂದುಹಾಕು. ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವುದು ಏಕೆ?” ಎಂದನು.