1 Samuel 21:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಹತ್ತಿರ ಬೇಕಾದಷ್ಟು ಹುಚ್ಚರಿದ್ದಾರೆ. ನನ್ನ ಎದುರಿನಲ್ಲಿ ಇವನು ಮಾಡುವ ಹುಚ್ಚಾಟವನ್ನು ನಾನು ನೋಡಲೆಂದು ಕರೆ ತಂದಿರುವಿರೋ? ಇವನು ಮತ್ತೆ ನನ್ನ ಮನೆಯೊಳಕ್ಕೆ ಬರಲು ಅವಕಾಶ ಕೊಡಬೇಡಿ” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಬೇಸರಗೊಳಿಸುವುದಕ್ಕಾಗಿ ಇವನನ್ನು ಕರೆತಂದಿರೋ? ಇಂಥವನೂ ನನ್ನ ಮನೆಗೆ ಬರಬೇಕೋ?” ಅಂದನು.
Kannada BSI Bible 2016
ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಮರುಳಾಟದಿಂದ ಬೇಸರಗೊಳಿಸುವದಕ್ಕಾಗಿ ಇವನನ್ನು ತಂದಿರೋ? ಇಂಥವನು ನನ್ನ ಮನೆಗೆ ಬರಬೇಕೋ ಅಂದನು.
Kannada Bible (KNCL) BSI 2016
ನನ್ನ ಬಳಿ ಹುಚ್ಚರು ಕಡಿಮೆಯೆಂದು ನೆನೆಸಿ ನನ್ನನ್ನು ಮರುಳುಮಾಡಿ ಬೇಸರಗೊಳಿಸುವುದಕ್ಕಾಗಿ ಇವನನ್ನು ತಂದಿರೋ? ಇಂಥವನು ನನ್ನ ಮನೆಗೆ ಬರಬೇಕಿತ್ತೋ?’ ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹುಚ್ಚರು ನನಗೆ ಅವಶ್ಯವೆಂದು ನೆನಸಿ ನನ್ನನ್ನು ಮರುಳುಮಾಡಿ ಬೇಸರಗೊಳಿಸುವುದಕ್ಕಾಗಿ ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇವನು ನನ್ನ ಮನೆಯಲ್ಲಿ ಬರಬೇಕೋ?” ಎಂದನು.