1 Samuel 21:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಜಕನು ದಾವೀದನಿಗೆ, “ನನ್ನ ಬಳಿ ಸಾಧಾರಣವಾದ ರೊಟ್ಟಿಗಳಿಲ್ಲ. ಆದರೆ ಕೆಲವು ಪವಿತ್ರ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅವುಗಳನ್ನು ತಿನ್ನಬಹುದು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಮೀಸಲು ರೊಟ್ಟಿಗಳು ಹೊರತು ಬೇರೆ ರೊಟ್ಟಿಗಳಿಲ್ಲ. ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು” ಎಂದನು.
Kannada BSI Bible 2016
ಯಾಜಕನು ದಾವೀದನಿಗೆ ಪ್ರತ್ಯುತ್ತರ ವಾಗಿ--ಪರಿಶುದ್ಧ ರೊಟ್ಟಿಯ ಹೊರತಾಗಿ ನನ್ನ ಕೈಯಲ್ಲಿ ಬಳಕೆಯಾದ ರೊಟ್ಟಿ ಒಂದಾದರೂ ಇಲ್ಲ; ಯೌವನ ಸ್ಥರು ಸ್ತ್ರೀಯರ ಬಳಿಗೆ ಸೇರದಿದ್ದರೆ ಅದು ಆಗಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕನು ದಾವೀದನಿಗೆ - ನನ್ನ ಬಳಿಯಲ್ಲಿ ಮೀಸಲ ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು ಎನ್ನಲು ದಾವೀದನು -
Kannada Bible (KNCL) BSI 2016
ಆ ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಪವಿತ್ರವಾದ ಮೀಸಲು ರೊಟ್ಟಿಗಳ ಹೊರತು ಬೇರೆ ರೊಟ್ಟಿಗಳಿಲ್ಲ; ನಿಮ್ಮ ಆಳುಗಳು ಸದ್ಯಕ್ಕೆ ಸಂಗಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನು ದಾವೀದನಿಗೆ ಉತ್ತರವಾಗಿ, “ಪರಿಶುದ್ಧವಾಗಿಸಿದ ರೊಟ್ಟಿಯ ಹೊರತಾಗಿ, ನನ್ನ ಕೈಯಲ್ಲಿ ಸಾಧಾರಣವಾದ ಒಂದು ರೊಟ್ಟಿಯಾದರೂ ಇಲ್ಲ. ಆ ರೊಟ್ಟಿಗಳನ್ನು ಸ್ತ್ರೀಯರೊಂದಿಗೆ ಸಂಪರ್ಕ ಮಾಡದವರಿಗೆ ಕೊಡಬಹುದು,” ಎಂದನು.