1 Samuel 21:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ಅಹೀಮೆಲೆಕನಿಗೆ, “ನಿನ್ನ ಹತ್ತಿರ ಖಡ್ಗವಾಗಲಿ ಭರ್ಜಿಯಾಗಲಿ ಇದೆಯೇ? ರಾಜನ ಕಾರ್ಯಭಾರವು ಬಹುಮುಖ್ಯವಾದುದು. ನಾನು ಬೇಗ ಹೋಗಬೇಕಾಗಿದೆ. ನಾನು ಕತ್ತಿಯನ್ನಾಗಲೀ ಇತರ ಆಯುಧವನ್ನಾಗಲಿ ತರಲಿಲ್ಲ” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ಅಹೀಮೆಲೆಕನನ್ನು, “ಅರಸನ ಕಾರ್ಯವು ತುರ್ತಾದ್ದರಿಂದ ಕತ್ತಿಯನ್ನಾಗಲಿ, ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲಿಲ್ಲ, ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ?” ಎಂದು ಕೇಳಿದನು.
Kannada BSI Bible 2016
ಆಗ ದಾವೀದ ನು ಅಹೀಮೆಲೆಕನಿಗೆ--ನಿನ್ನ ಕೈಯಲ್ಲಿ ಈಟಿಯಾದರೂ ಕತ್ತಿಯಾದರೂ ಇಲ್ಲವೋ? ಯಾಕಂದರೆ ಅರಸನ ಕಾರ್ಯವು ಅವಸರವಾದದ್ದರಿಂದ ನಾನು ನನ್ನ ಕತ್ತಿ ಯನ್ನಾದರೂ ಆಯುಧಗಳನ್ನಾದರೂ ತಕ್ಕೊಂಡು ಬರಲಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ಅಹೀಮೆಲೆಕನನ್ನು - ಅರಸನ ಕಾರ್ಯವು ಅವಸರವಾಗಿದ್ದದರಿಂದ ಕತ್ತಿಯನ್ನಾಗಲಿ ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲು ಆಗಲಿಲ್ಲ; ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ ಎಂದು ಕೇಳಲು ಅವನು -
Kannada Bible (KNCL) BSI 2016
ದಾವೀದನು ಅಹೀಮೆಲೆಕನನ್ನು, “ಅರಸನ ಕಾರ್ಯ ತುರ್ತಾದದ್ದು. ಆದ್ದರಿಂದ ಕತ್ತಿಯನ್ನಾಗಲಿ ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲು ಆಗಲಿಲ್ಲ. ನಿನ್ನ ಬಳಿಯಲ್ಲಿ ಭರ್ಜಿಯಾಗಲಿ, ಕತ್ತಿಯಾಗಲಿ ಇಲ್ಲವೇ?’ ಎಂದು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದಾವೀದನು ಅಹೀಮೆಲೆಕನಿಗೆ, “ಇಲ್ಲಿ ನಿನ್ನ ಕೈ ವಶದಲ್ಲಿ ಈಟಿಯಾದರೂ, ಖಡ್ಗವಾದರೂ ಇಲ್ಲವೋ? ಏಕೆಂದರೆ ಅರಸನ ಕಾರ್ಯವು ಅವಸರವಾದುದರಿಂದ ನಾನು ನನ್ನ ಖಡ್ಗವನ್ನಾದರೂ, ಆಯುಧಗಳನ್ನಾದರೂ ತೆಗೆದುಕೊಂಡು ಬರಲಿಲ್ಲ,” ಎಂದನು.