1 Samuel 22:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ಗತ್ತನ್ನು ಬಿಟ್ಟು ಅದುಲ್ಲಾಮ್ ಗವಿಗೆ ಓಡಿಹೋದನು. ದಾವೀದನು ಅದುಲ್ಲಾಮಿನಲ್ಲಿರುವುದು ಅವನ ಅಣ್ಣಂದಿರಿಗೂ ಬಂಧುಗಳಿಗೂ ತಿಳಿಯಿತು. ಅವರು ದಾವೀದನನ್ನು ನೋಡಲು ಅಲ್ಲಿಗೆ ಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ಅಕೀಷ ರಾಜನಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ವರ್ತಮಾನವು ಅವನ ಅಣ್ಣಂದಿರಿಗೂ, ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಲಾಗಿ, ಅವರೂ ಬಂದು ಅವನನ್ನು ಸೇರಿಕೊಂಡರು.
Kannada BSI Bible 2016
ದಾವೀದನು ಆ ಸ್ಥಳದಿಂದ ತಪ್ಪಿಸಿಕೊಂಡು ಅದುಲ್ಲಾಮೆಂಬ ಗವಿಗೆ ಬಂದನು. ಈ ವರ್ತಮಾನವನ್ನು ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಕೇಳಿ ಅವನ ಬಳಿಗೆ ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ಅಲ್ಲಿಂದ ತಪ್ಪಿಸಿಕೊಂಡು ಅದುಲ್ಲಾಮೆಂಬ ಗವಿಗೆ ಹೋದನು. ಈ ವರ್ತಮಾನವು ಅವನ ಅಣ್ಣಂದಿರಿಗೂ ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಲಾಗಿ ಅವರೂ ಬಂದು ಅವನನ್ನು ಸೇರಿಕೊಂಡರು.
Kannada Bible (KNCL) BSI 2016
ದಾವೀದನು ಅಲ್ಲಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಹೋದನು. ಈ ಸಮಾಚಾರ, ಅವನ ಅಣ್ಣಂದಿರಿಗೂ ಬೇರೆ ಎಲ್ಲಾ ಸಂಬಂಧಿಕರಿಗೂ ಮುಟ್ಟಿತು. ಅವರೂ ಬಂದು ಅವನನ್ನು ಸೇರಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಆ ಸ್ಥಳದಿಂದ ತಪ್ಪಿಸಿಕೊಂಡು ಅದುಲ್ಲಾಮ್ ಎಂಬ ಗವಿಗೆ ಬಂದನು. ಆ ವರ್ತಮಾನವನ್ನು ಅವನ ಸಹೋದರರೂ, ಅವನ ತಂದೆಯ ಮನೆಯವರೆಲ್ಲರೂ ಕೇಳಿ, ಅವನ ಬಳಿಗೆ ಅಲ್ಲಿಗೆ ಬಂದರು.