1 Samuel 22:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನು ಅಹೀಮೆಲೆಕನಿಗೆ, “ನೀನು ಮತ್ತು ಇಷಯನ ಮಗ ನನ್ನ ವಿರುದ್ಧ ರಹಸ್ಯಯೋಜನಗೆಳನ್ನು ಏಕೆ ಮಾಡಿದಿರಿ? ನೀನು ದಾವೀದನಿಗೆ ರೊಟ್ಟಿಯನ್ನೂ ಖಡ್ಗವನ್ನೂ ಕೊಟ್ಟೆ! ನೀನು ಅವನಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಈಗ ದಾವೀದನು ನನ್ನ ಮೇಲೆ ಆಕ್ರಮಣಮಾಡಲು ಕಾಯುತ್ತಿದ್ದಾನೆ!” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಸೌಲನು ಅವನಿಗೆ, “ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು, ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು
Kannada BSI Bible 2016
ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಸೌಲನು ಅವನಿಗೆ - ನೀನು ನನಗೆ ವಿರೋಧವಾಗಿ ಇಷಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಕತ್ತಿಗಳನ್ನು ಕೊಟ್ಟು ದೈವೋತ್ತರವನ್ನು ತಿಳಿಸಿದ್ದೇಕೆ ಎಂದು ಕೇಳಲು ಅವನು -
Kannada Bible (KNCL) BSI 2016
ಆಗ ಸೌಲನು, “ನೀನು ನನಗೆ ವಿರೋಧವಾಗಿ ಜೆಸ್ಸೆಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿ ಹಾಗು ಕತ್ತಿಯನ್ನು ಕೊಟ್ಟು ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನು ಅವನಿಗೆ, “ನೀನೂ, ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋಧವಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿಯನ್ನೂ, ಖಡ್ಗವನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು? ಅವನು ಇಂದಿನವರೆಗೂ ನನ್ನನ್ನು ಕೊಲ್ಲುವುದಕ್ಕೆ ಕಾಯುತ್ತಿದ್ದಾನೆ?” ಎಂದು ಕೇಳಿದನು.