1 Samuel 23:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು ಮತ್ತು ಅವನ ಜನರು ದಾವೀದನನ್ನು ಕಂಡುಹಿಡಿಯಲು ಹೋದರು. ಆದರೆ ದಾವೀದನನ್ನು ಜನರು ಎಚ್ಚರಿಸಿದರು. ಸೌಲನು ಅವನನ್ನು ಹುಡುಕುತ್ತಿರುವನೆಂದು ಜನರು ಅವನಿಗೆ ಹೇಳಿದರು. ದಾವೀದನು ಮಾವೋನಿನ ಅರಣ್ಯದಲ್ಲಿರುವ ಕಡಿದಾದ ಬೆಟ್ಟಕ್ಕೆ ಹೋದನು. ದಾವೀದನು ಮಾವೋನಿನ ಅರಣ್ಯಕ್ಕೆ ಹೋದನೆಂಬುದನ್ನು ಕೇಳಿದ ಸೌಲನು ದಾವೀದನನ್ನು ಕಂಡುಹಿಡಿಯಲು ಆ ಸ್ಥಳಕ್ಕೆ ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ವರ್ತಮಾನವು ದಾವೀದನಿಗೆ ತಲುಪಲು ಅವನು ಮಾವೋನಿನಲ್ಲಿರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ ಅರಣ್ಯಕ್ಕೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು.
Kannada BSI Bible 2016
ಸೌಲನೂ ಅವನ ಮನುಷ್ಯರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಬಂಡೆಗೆ ಇಳಿದು ಮಾವೋನಿನ ಅರಣ್ಯದಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಅರಣ್ಯದಲ್ಲಿ ದಾವೀದ ನನ್ನು ಹಿಂದಟ್ಟಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವದಕ್ಕೆ ಬಂದನು. ಈ ವರ್ತಮಾನವು ದಾವೀದನಿಗೆ ಮುಟ್ಟಲು ಅವನು ಮಾವೋನಿನಲ್ಲಿರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು.
Kannada Bible (KNCL) BSI 2016
ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ಸಮಾಚಾರ ದಾವೀದನಿಗೆ ಸಿಕ್ಕಿತು. ಅವನು ಮಾವೋನಿನಲ್ಲಿ ಇರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ್ ಮರುಭೂಮಿಗೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನೂ, ಅವನ ಜನರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿದಾಗ, ಅವನು ಬಂಡೆಗಳಲ್ಲಿ ಇಳಿದು ಮಾವೋನಿನ ಮರುಭೂಮಿಯಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಮರುಭೂಮಿಯಲ್ಲಿ ದಾವೀದನನ್ನು ಹಿಂದಟ್ಟಿದನು.