1 Samuel 25:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಜನರು ನಮಗೆ ಬಹಳ ಒಳ್ಳೆಯವರಾಗಿದ್ದರು. ನಾವು ಆಡುಗಳೊಂದಿಗೆ ಹೊಲಗಳಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲೆಲ್ಲ ನಮ್ಮ ಜೊತೆಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಲಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲೆಲ್ಲ ನಮ್ಮಿಂದ ಏನನ್ನೂ ಕದಿಯಲಿಲ್ಲ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಜನರು ನಮಗೆ ಬಹಳ ಉಪಕಾರ ಮಾಡಿದವರು. ನಾವು ಅವರೊಡನೆ ಮರುಭೂಮಿಯಲ್ಲಿದ್ದ ಕಾಲವೆಲ್ಲಾ ಅವರು ನಮಗೆ ಏನೂ ತೊಂದರೆಕೊಡಲಿಲ್ಲ, ನಾವು ನಷ್ಟಹೊಂದಲಿಲ್ಲ.
Kannada BSI Bible 2016
ಆ ಮನುಷ್ಯರು ನಮಗೆ ಬಹಳ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನ ಗಳೆಲ್ಲಾ ನಾವು ತೊಂದರೆಪಡಲಿಲ್ಲ; ಒಂದನ್ನಾದರೂ ಕಳಕೊಳ್ಳಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಜನರು ನಮಗೆ ಬಹಳ ಉಪಕಾರಮಾಡಿದವರು; ನಾವು ಅವರೊಡನೆ ಅಡವಿಯಲ್ಲಿದ್ದ ಕಾಲವೆಲ್ಲಾ ಏನೂ ತೊಂದರೆಪಡಲಿಲ್ಲ. ನಷ್ಟಹೊಂದಲಿಲ್ಲ.
Kannada Bible (KNCL) BSI 2016
ಆ ಜನರು ನಮಗೆ ಬಹಳ ಉಪಕಾರ ಮಾಡಿದವರು; ನಾವು ಅವರೊಡನೆ ಅಡವಿಯಲ್ಲಿದ್ದ ಕಾಲವೆಲ್ಲಾ ಏನೂ ತೊಂದರೆಪಡಲಿಲ್ಲ, ನಷ್ಟಹೊಂದಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಇವನು ಅವರನ್ನು ನಿಂದಿಸಿದನು. ಆ ಜನರು ನಮಗೆ ಮಹಾ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನಗಳೆಲ್ಲಾ ನಾವು ತೊಂದರೆ ಪಡಲಿಲ್ಲ. ಒಂದನ್ನಾದರೂ ಕಳೆದುಕೊಳ್ಳಲಿಲ್ಲ.