1 Samuel 25:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ಅದರ ಬಗ್ಗೆ ಯೋಚಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ಮೂರ್ಖನಾದ ನಾಬಾಲನೊಂದಿಗೆ ಮಾತಾಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ. ನಮ್ಮ ಒಡೆಯನಿಗೂ ಅವನ ಕುಟುಂಬಕ್ಕೂ ಭೀಕರವಾದ ಕೇಡು ಬರಲಿದೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ಮಾಡಬೇಕಾದದ್ದನ್ನು ನೀನೇ ಆಲೋಚಿಸಿ ಗೊತ್ತುಮಾಡು. ನಮ್ಮ ಯಜಮಾನನಿಗೂ, ಅವನ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ. ಮೂರ್ಖನಾದ ಅವನೊಡನೆ ಮಾತನಾಡುವುದು ಅಸಾಧ್ಯ” ಎಂದು ಹೇಳಿದನು.
Kannada BSI Bible 2016
ಈಗ ನೀನು ಅದಕ್ಕೆ ಮಾಡಬೇಕಾ ದದ್ದೇನೆಂದು ತಿಳುಕೊಂಡು ನೋಡು. ಯಾಕಂದರೆ ಕೇಡು ನಮ್ಮ ಯಜಮಾನನ ಮೇಲೆಯೂ ಅವನ ಮನೆಯೆಲ್ಲಾದರ ಮೇಲೆಯೂ ನಿಶ್ಚಯಿಸಲ್ಪಟ್ಟಿದೆ; ಏನಂದರೆ, ಅವನು ಬೆಲಿಯಾಳನ ಮಗನಾಗಿರುವದ ರಿಂದ ಅವನ ಸಂಗಡ ಯಾವನೂ ಮಾತನಾಡ ಕೂಡದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗ ಮಾಡಬೇಕಾದದ್ದನ್ನು ನೀನೇ ಆಲೋಚಿಸಿ ಗೊತ್ತುಮಾಡು. ನಮ್ಮ ಯಜಮಾನನಿಗೂ ಅವನ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ; ಮೂರ್ಖನಾದ ಅವನೊಡನೆ ಮಾತಾಡುವದಸಾಧ್ಯ ಎಂದು ಹೇಳಿದನು.
Kannada Bible (KNCL) BSI 2016
ಈಗ ಮಾಡಬೇಕಾದುದ್ದನ್ನು ನೀವೇ ಆಲೋಚಿಸಿ ತೀರ್ಮಾನಿಸಿ. ನಮ್ಮ ಯಜಮಾನರಿಗೂ ಅವರ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ; ಮಂದಮತಿಯಾದ ಅವರೊಡನೆ ಮಾತಾಡುವುದು ಅಸಾಧ್ಯ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಗ ನೀನು ಮಾಡಬೇಕಾದದ್ದೇನೆಂದು ಆಲೋಚಿಸಿ ನೋಡು. ಏಕೆಂದರೆ ಕೇಡು ನಮ್ಮ ಯಜಮಾನನ ಮೇಲೂ ಅವನ ಮನೆಯ ಮೇಲೆಯೂ ನಿಶ್ಚಯವಾಗಿದೆ. ದುಷ್ಟನಾಗಿರುವ ಅವನ ಸಂಗಡ ಮಾತನಾಡುವುದು ಅಸಾಧ್ಯ,” ಎಂದನು.