1 Samuel 25:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸ್ವಾಮೀ, ನೀನು ಸ್ವಹಸ್ತದಿಂದ ಮುಯ್ಯಿ ತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನಾಣೆ, ನಿನ್ನ ಜೀವದಾಣೆ ನಿನ್ನ ವಿರೋಧಿಗಳೂ, ನಿನಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ.
Kannada BSI Bible 2016
ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ವಾಮೀ, ನೀನು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆ, ನಿನ್ನ ಜೀವದಾಣೆ, ನಿನ್ನ ವಿರೋಧಿಗಳೂ ನಿನಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ.
Kannada Bible (KNCL) BSI 2016
ಒಡೆಯಾ, ತಾವು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಸರ್ವೇಶ್ವರ ತಮ್ಮನ್ನು ಕಾಪಾಡಿದ್ದಾರೆ. ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಿಮ್ಮ ವಿರೋಧಿಗಳೂ ನಿಮಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವುದಕ್ಕೂ, ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಹೋಗುವುದನ್ನು ದೇವರು ತಡೆದದ್ದರಿಂದ, ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ ನಿನ್ನ ಶತ್ರುಗಳೂ, ನನ್ನ ಒಡೆಯನಿಗೆ ಕೇಡನ್ನು ಹುಡುಕುವವರೂ ನಾಬಾಲನ ಹಾಗೆಯೇ ಆಗಲಿ.