1 Samuel 25:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿರಪರಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬಲೆಗೂ ಬೀಳುವುದಿಲ್ಲ. ನೀನು ಆ ಮಹಾಪದವಿಗೆ ಬಂದಾಗ ನನ್ನನ್ನು ಮರೆತುಬಿಡಬೇಡ” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿ ತೀರಿಸಿದ್ದರಿಂದ ಉಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವುದಿಲ್ಲ. ಆತನೇ ನಿನ್ನನ್ನು ಮಹಾ ಪದವಿಗೆ ತರುವಾಗ ನಿನ್ನ ದಾಸಿಯಾದ ನನ್ನನ್ನು ಮರೆತುಬಿಡಬೇಡ” ಅಂದಳು.
Kannada BSI Bible 2016
ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿತೀರಿಸಿದ್ದರಿಂದುಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ. ಆತನು ನಿನ್ನನ್ನು ಮಹಾಪದವಿಗೆ ತರುವಾಗ ನಿನ್ನ ದಾಸಿಯಾದ ನನ್ನನ್ನು ಮರೆತುಬಿಡಬೇಡ ಅಂದಳು.
Kannada Bible (KNCL) BSI 2016
ಆಗ ನಿರಪರಾಧಿಯ ರಕ್ತವನ್ನು ಸುರಿಸಿ ಸೇಡುತೀರಿಸಿಕೊಂಡದ್ದಕ್ಕಾಗಿ ವಿಷಾದ, ಪಶ್ಚಾತ್ತಾಪಗಳಿಗೆ ಕಾರಣವಿರುವುದಿಲ್ಲ. ಸರ್ವೇಶ್ವರ ನಿಮ್ಮನ್ನು ಮಹಾಪದವಿಗೆ ಏರಿಸುವಾಗ ನಿಮ್ಮ ದಾಸಿಯಾದ ನನ್ನನ್ನು ಮರೆತುಬಿಡಬೇಡಿ,” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಸುಮ್ಮನೆ ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡದ್ದರಿಂದ ಉಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ. ಆದರೆ ನನ್ನ ಒಡೆಯನನ್ನು ಯೆಹೋವ ದೇವರು ಚೆನ್ನಾಗಿ ನಡೆಸಿದಾಗ, ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು,” ಎಂದಳು.