1 Samuel 25:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಒಳ್ಳೆಯ ತೀರ್ಪಿಗಾಗಿ ದೇವರು ನಿನ್ನನ್ನು ಆಶೀರ್ವದಿಸಲಿ. ಈ ದಿನ ನಾನು ನಿರ್ದೋಷಿಗಳನ್ನು ಕೊಲ್ಲದಂತೆ ನೀನು ನನ್ನನ್ನು ತಡೆದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸ್ವಹಸ್ತದಿಂದ ಮುಯ್ಯಿ ತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ, ನಿನ್ನ ಬುದ್ಧಿಯೂ ಸ್ತೋತ್ರಾರ್ಹವೆ. ಸರಿ.
Kannada BSI Bible 2016
ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ.
Kannada Bible (KNCL) BSI 2016
ಸ್ವಹಸ್ತದಿಂದ ಸೇಡುತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಜಾಣ್ಮೆಯೂ ಸ್ತುತ್ಯರ್ಹವೇ ಸರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಬುದ್ಧಿಮಾತಿಗಾಗಿಯೂ, ನಾನು ರಕ್ತ ಚೆಲ್ಲುವುದಕ್ಕೂ, ನನ್ನ ಕೈಯಿಂದ ನನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಈ ಹೊತ್ತು ನನ್ನನ್ನು ತಡೆದ ನಿನಗೆ ಆಶೀರ್ವಾದ ಆಗಲಿ.