1 Samuel 25:37 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾಘಾತವಾಯಿತು. ಅವನು ಸ್ತಬ್ಧನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮರುದಿನ ಬೆಳಿಗ್ಗೆ ಅಮಲಿಳಿದ ನಂತರ ಈಕೆಯು ಈ ವರ್ತಮಾನವನ್ನು ಅವನಿಗೆ ತಿಳಿಸಲಾಗಿ, ಅವನ ಹೃದಯವೇ ನಿಂತಂತೆ ಆಯಿತು. ಅವನು ಸ್ತಬ್ಧನಾದನು.
Kannada BSI Bible 2016
ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮರುದಿನ ಅಮಲಿಳಿದನಂತರ ಈಕೆಯು ಈ ವರ್ತಮಾನವನ್ನು ಅವನಿಗೆ ತಿಳಿಸಲಾಗಿ ಅವನ ಹೃದಯವು ನಿಂತುಹೋಯಿತು, ಅವನು ಸ್ತಬ್ಧನಾದನು.
Kannada Bible (KNCL) BSI 2016
ಮರುದಿನ ಅಮಲಿಳಿದ ನಂತರ ಈಕೆ ಈ ಸಮಾಚಾರವನ್ನು ಅವನಿಗೆ ತಿಳಿಸಿದಳು. ಆಗ ಅವನ ಗುಂಡಿಗೆ ಒಡೆಯಿತು. ಅವನು ಕಲ್ಲಿನಂತಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು.