1 Samuel 26:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ಸೌಲನ ಸೈನ್ಯವನ್ನೂ ನೇರನ ಮಗನಾದ ಅಬ್ನೇರನನ್ನೂ ಉದ್ದೇಶಿಸಿ, “ಅಬ್ನೇರನೇ, ನನಗೆ ಉತ್ತರಿಸು” ಎಂದು ಕೂಗಿಕೊಂಡನು. ಅಬ್ನೇರನು, “ನೀನು ಯಾರು? ರಾಜನನ್ನು ನೀನು ಕರೆಯುತ್ತಿರುವುದೇಕೆ?” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅಬ್ನೇರನೇ ಕಿವಿಗೊಡುವುದಿಲ್ಲವೋ?” ಎಂದು ನೇರನ ಮಗನಾದ ಅವನಿಗೂ, ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, “ಅರಸನನ್ನು ಕೂಗುವ ನೀನಾರು?” ಎಂದು ಕೇಳಿದನು.
Kannada BSI Bible 2016
ಅಬ್ನೇರನೇ, ನೀನು ಪ್ರತ್ಯುತ್ತರ ಕೊಡುವದಿಲ್ಲವೋ ಅಂದನು. ಅದಕ್ಕೆ ಅಬ್ನೇರನು ಪ್ರತ್ಯುತ್ತರವಾಗಿ--ಅರಸನಿಗೆ ಎದುರಾಗಿ ಕೂಗುವ ನೀನು ಯಾರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಬ್ನೇರನೇ, ಕಿವಿಗೊಡುವದಿಲ್ಲವೋ ಎಂದು ನೇರನ ಮಗನಾದ ಅವನಿಗೂ ಸೈನಿಕರಿಗೂ ಕೇಳಿಸುವಂತೆ ಕೂಗಲು ಅಬ್ನೇರನು - ಅರಸನನ್ನು ಕೂಗುವ ನೀನಾರು ಎಂದು ಕೇಳಿದನು.
Kannada Bible (KNCL) BSI 2016
ಅಲ್ಲಿಂದ, “ಅಬ್ನೇರನೇ, ನನ್ನ ಮಾತು ಕೇಳಿಸುತ್ತಿದ್ದೇಯೋ?” ಎಂದು ನೇರನ ಮಗನಾದ ಅಬ್ನೇರನಿಗೂ ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, “ಅರಸನನ್ನು ಕೂಗುವ ನೀನಾರು?” ಎಂದು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೈನಿಕರಿಗೂ ನೇರನ ಮಗನಾದ ಅಬ್ನೇರನಿಗೂ ಕೇಳಿಸುವಂತೆ ಕೂಗಿ, “ಅಬ್ನೇರನೇ, ನೀನು ಉತ್ತರ ಕೊಡುವುದಿಲ್ಲವೋ?” ಎಂದನು. ಅದಕ್ಕೆ ಅಬ್ನೇರನು ಉತ್ತರವಾಗಿ, “ಅರಸನಿಗೆ ಎದುರಾಗಿ ಕೂಗುವ ನೀನು ಯಾರು?” ಎಂದನು.