1 Samuel 26:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನ ಧ್ವನಿಯು ಸೌಲನಿಗೆ ತಿಳಿಯಿತು. ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. ದಾವೀದನು, “ಹೌದು, ನನ್ನ ಒಡೆಯನಾದ ರಾಜನೇ, ಇದು ನನ್ನ ಧ್ವನಿ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನು ದಾವೀದನ ಸ್ವರದ ಗುರುತು ಹಿಡಿದು ಅವನನ್ನು, “ದಾವೀದನೇ ನನ್ನ ಮಗನೇ, ಇದು ನಿನ್ನ ಸ್ವರವೋ” ಎಂದು ಕೇಳಲು ಅವನು, “ಅರಸನೇ, ನನ್ನ ಒಡೆಯನೇ ಹೌದು, ನನ್ನ ಸ್ವರವೇ,
Kannada BSI Bible 2016
ಆಗ ಸೌಲನು ದಾವೀದನ ಶಬ್ದವನ್ನು ತಿಳುಕೊಂಡು--ನನ್ನ ಕುಮಾರನಾದ ದಾವೀ ದನೇ, ಇದು ನಿನ್ನ ಸ್ವರವಲ್ಲವೋ ಅಂದನು. ದಾವೀ ದನು--ಅರಸನಾದ ನನ್ನ ಒಡೆಯನೇ, ನನ್ನ ಸ್ವರವೇ ಹೌದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ದಾವೀದನ ಸ್ವರದ ಗುರುತು ಹಿಡಿದು ಅವನನ್ನು - ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ ಎಂದು ಕೇಳಲು ಅವನು - ಅರಸನೇ, ನನ್ನ ಒಡೆಯನೇ, ಹೌದು ನನ್ನ ಸ್ವರವೇ;
Kannada Bible (KNCL) BSI 2016
ಸೌಲನು ದಾವೀದನ ಸ್ವರದ ಗುರುತು ಹಿಡಿದನು. “ದಾವೀದನೇ, ನನ್ನ ಪುತ್ರನೇ, ಇದು ನಿನ್ನ ಸ್ವರವೇ?” ಎಂದು ಕೇಳಿದನು. ಅವನು, “ಅರಸನೇ, ನನ್ನ ಒಡೆಯನೇ, ಹೌದು, ನನ್ನ ಸ್ವರವೇ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸೌಲನು ದಾವೀದನ ಸ್ವರವನ್ನು ತಿಳಿದುಕೊಂಡು, “ನನ್ನ ಪುತ್ರನಾದ ದಾವೀದನೇ, ಇದು ನಿನ್ನ ಸ್ವರವಲ್ಲವೋ?” ಎಂದನು. ದಾವೀದನು, “ಅರಸನಾದ ನನ್ನ ಒಡೆಯನೇ, ನನ್ನ ಧ್ವನಿಯೇ ಹೌದು,” ಎಂದನು.