1 Samuel 26:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಜೀವವು ನನಗೆ ಮುಖ್ಯವೆಂಬುದನ್ನು ಈ ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವು ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲಾ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಈ ಹೊತ್ತು ನಿನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿದಂತೆ ಯೆಹೋವನು ನನ್ನ ಜೀವವನ್ನು ಮಾನ್ಯವಾದದ್ದೆಂದು ಎಣಿಸಿ, ಎಲ್ಲಾ ಇಕ್ಕಟ್ಟಿನಿಂದ ಬಿಡಿಸಲಿ” ಎಂದನು.
Kannada BSI Bible 2016
ಇಗೋ, ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ ಹಾಗೆಯೇ ನನ್ನ ಪ್ರಾಣವು ಕರ್ತನ ದೃಷ್ಟಿಗೆ ದೊಡ್ಡದಾಗಿರಲಿ. ಆತನು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ ಅಂದನು.ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಈಹೊತ್ತು ನಿನ್ನ ಜೀವವನ್ನು ಮಾನ್ಯವಾದದ್ದೆಂದೆಣಿಸಿದಂತೆ ಯೆಹೋವನು ನನ್ನ ಜೀವವನ್ನೂ ಮಾನ್ಯವಾದದ್ದೆಂದೆಣಿಸಿ ನನ್ನನ್ನು ಎಲ್ಲಾ ಇಕ್ಕಟ್ಟಿನಿಂದ ಬಿಡಿಸಲಿ ಎಂದನು.
Kannada Bible (KNCL) BSI 2016
ನಾನು ಈ ದಿನ ನಿಮ್ಮ ಜೀವವನ್ನು ಮಾನ್ಯವಾದದ್ದೆಂಣಿಸಿದಂತೆ ಸರ್ವೇಶ್ವರ ನನ್ನ ಜೀವವನ್ನೂ ಮಾನ್ಯವಾದದ್ದೆಂದೆಣಿಸಿ ನನ್ನನ್ನು ಎಲ್ಲ ಇಕ್ಕಟ್ಟಿನಿಂದ ಬಿಡಿಸಲಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ, ಹಾಗೆಯೇ ನನ್ನ ಪ್ರಾಣವು ಯೆಹೋವ ದೇವರ ದೃಷ್ಟಿಗೆ ದೊಡ್ಡದಾಗಿರಲಿ. ಅವರು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ,” ಎಂದನು.