1 Samuel 28:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು. ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಲು, “ಭೂಮಿಯೊಳಗಿಂದ ಒಬ್ಬ ದೇವನು ಬರುತ್ತಿರುವುದನ್ನು ನೋಡುತ್ತೇನೆ” ಎಂದು ಉತ್ತರ ಕೊಟ್ಟಳು.
Kannada BSI Bible 2016
ಅರಸನು ಅವಳಿಗೆಭಯಪಡಬೇಡ. ನೀನು ನೋಡಿದ್ದೇನು ಅಂದನು. ಆಗ ಆ ಸ್ತ್ರೀಯು ಸೌಲನಿಗೆ--ದೇವರುಗಳು ಭೂಮಿ ಯೊಳಗಿಂದ ಎದ್ದು ಬರುವದನ್ನು ನೋಡಿದೆನು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು - ಹೆದರಬೇಡ; ನಿನಗೇನು ಕಾಣಿಸುತ್ತದೆ ಎಂದು ಆಕೆಯನ್ನು ಕೇಳಲು - ಭೂವಿುಯೊಳಗಿಂದ ಒಬ್ಬ ದೇವನು ಬರುತ್ತಿರುವದನ್ನು ನೋಡುತ್ತೇನೆ ಎಂದು ಉತ್ತರಕೊಟ್ಟಳು.
Kannada Bible (KNCL) BSI 2016
ಆಗ ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಿದನು. “ಭೂಮಿಯೊಳಗಿಂದ ಪ್ರೇತಾತ್ಮವೊಂದು ಬರುತ್ತಿರುವುದನ್ನು ನೋಡುತ್ತಿದ್ದೇನೆ,” ಎಂದು ಉತ್ತರಕೊಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನು ಅವಳಿಗೆ, “ಭಯಪಡಬೇಡ, ನೀನು ಕಂಡದ್ದೇನು?” ಎಂದನು. ಆಗ ಸ್ತ್ರೀಯು ಸೌಲನಿಗೆ, “ಒಂದು ಆತ್ಮವು ಭೂಮಿಯಿಂದ ಎದ್ದು ಬರುವುದನ್ನು ಕಂಡೆನು,” ಎಂದಳು.