1 Samuel 28:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಸಮುವೇಲನು, “ಯೆಹೋವನು ನಿನ್ನನ್ನು ಬಿಟ್ಟು ನಿನಗೆ ವಿರೋಧಿಯಾದ ಮೇಲೆ, ನೀನು ನನ್ನನ್ನು ವಿಚಾರಿಸುವುದೇಕೆ?
Kannada BSI Bible 2016
ಸಮುವೇಲನು ಅವನಿಗೆ--ಕರ್ತನು ನಿನ್ನನ್ನು ಬಿಟ್ಟುಹೋಗಿ ನಿನಗೆ ಶತ್ರುವಾಗಿರುವಾಗ ನೀನು ನನ್ನನ್ನು ಕೇಳುವದು ಯಾಕೆ? ಕರ್ತನು ನನ್ನ ಮುಖಾಂತರ ಹೇಳಿದ ಹಾಗೆಯೇ ನಿನಗೆ ಮಾಡಿದ್ದಾನೆ;
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಸಮುವೇಲನು - ಯೆಹೋವನು ನಿನ್ನನ್ನು ಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವದೇಕೆ?
Kannada Bible (KNCL) BSI 2016
ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮುಯೇಲನು ಅವನಿಗೆ, “ಯೆಹೋವ ದೇವರು ನಿನ್ನನ್ನು ಬಿಟ್ಟು ಹೋಗಿ ನಿನಗೆ ಶತ್ರುವಾಗಿರುವಾಗ, ನೀನು ನನ್ನನ್ನು ಕೇಳುವುದು ಏಕೆ?