1 Samuel 28:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು. ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಹೌದು ನಿನ್ನ ದಾಸನ ಸಾಹಸವು ಗೊತ್ತಾಗುವುದು” ಅಂದನು. ಆಕೀಷನು ಅವನಿಗೆ, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುವೆನು” ಅಂದನು.
Kannada BSI Bible 2016
ದಾವೀದನು ಆಕೀಷನಿಗೆ--ನಿಶ್ಚಯವಾಗಿ ನಿನ್ನ ದಾಸನು ಮಾಡುವದನ್ನು ತಿಳುಕೊಳ್ಳುವಿ ಅಂದನು. ಆಕೀಷನು ದಾವೀದನಿಗೆ--ಎಂದೆಂದಿಗೂ ನಾನು ನಿನ್ನನ್ನು ತಲೆಗಾವಲಿಯವನಾಗಿರಲು ಮಾಡುವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೌದು, ನಿನ್ನ ದಾಸನ ಸಾಹಸವು ಗೊತ್ತಾಗುವದು ಅಂದನು. ಆಕೀಷನು ಅವನಿಗೆ - ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇವಿುಸಿಕೊಳ್ಳುವೆನು ಅಂದನು.
Kannada Bible (KNCL) BSI 2016
ದಾವೀದನು, “ಹೌದು, ತಮ್ಮ ಸೇವಕನ ಸಾಹಸ ತಮಗೇ ಗೊತ್ತಾಗುವುದು,” ಎಂದನು. ಆಕೀಷನು, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುತ್ತೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಆಕೀಷನಿಗೆ, “ನಿಶ್ಚಯವಾಗಿ ನಿನ್ನ ದಾಸನು ಮಾಡುವುದನ್ನು ನೀನೇ ತಿಳಿದುಕೊಳ್ಳುವಿ,” ಎಂದನು. ಆಕೀಷನು ದಾವೀದನಿಗೆ, “ಎಂದೆಂದಿಗೂ ನಾನು ನಿನ್ನನ್ನು ಕಾವಲುಗಾರನಾಗಿ ಮಾಡುವೆನು,” ಎಂದನು.