1 Samuel 28:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆಕೆಯು ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು. ಅವನು ಸತ್ತವರಲ್ಲಿ ವಿಚಾರಿಸುವವರನ್ನು ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನಲ್ಲಾ, ಹೀಗಿದ್ದರೂ ನಾನೂ ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರುಲೊಡ್ಡುವುದೇಕೆ?” ಅಂದಳು.
Kannada BSI Bible 2016
ಆ ಸ್ತ್ರೀಯು ಅವನಿಗೆ--ಇಗೋ, ಸೌಲನು ಯಕ್ಷಿಣಿಗಾರರನ್ನೂ ಮಂತ್ರಗಾರರನ್ನೂ ದೇಶದಲ್ಲಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವದಕ್ಕೆ ಕಾರಣ ವಾಗುವ ಹಾಗೆ ಯಾಕೆ ನನ್ನ ಪ್ರಾಣಕ್ಕೆ ಉರ್ಲಿಡುತ್ತೀ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಆಕೆಯು ಅವನಿಗೆ - ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನಲ್ಲಾ; ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವದೇಕೆ ಅಂದಳು.
Kannada Bible (KNCL) BSI 2016
ಆಗ ಆಕೆ ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನು ಹಾಗು ಬೇತಾಳಿಕರನ್ನು ನಾಡಿನಿಂದ ಹೊರಡಿಸಿಬಿಟ್ಟನಲ್ಲವೇ? ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವುದೇಕೆ?” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಸ್ತ್ರೀಯು ಅವನಿಗೆ, “ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವುದಕ್ಕೆ ಕಾರಣವಾಗುವ ಹಾಗೆ ಏಕೆ ನನ್ನ ಪ್ರಾಣಕ್ಕೆ ಉರುಳಿಡುತ್ತಿ?” ಎಂದಳು.